ಕೊರೋನಾ ವೈರಸ್ ಎಫೆಕ್ಟ್: ಎನ್ ಪಿಆರ್-ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಮುಂದೂಡಿದ ಕೇಂದ್ರ ಸರ್ಕಾರ

ಕೊರೋನಾ ವೈರಸ್ ಸೋಂಕು (ಕೋವಿಡ್–19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆಯನ್ನು ಕೇಂದ್ರ ಸರ್ಕಾರ ಮುಂದೂಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ಸೋಂಕು (ಕೋವಿಡ್–19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆಯನ್ನು ಕೇಂದ್ರ ಸರ್ಕಾರ ಮುಂದೂಡಿದೆ ಎಂದು ತಿಳಿದುಬಂದಿದೆ.

2021ರ ಮೊದಲ ಹಂತದ ಜನಗಣತಿ ಮತ್ತು ಎನ್‌ಪಿಆರ್‌ ಅನ್ನು ಮುಂದಿನ ಆದೇಶದ ವರೆಗೆ ಮುಂದೂಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಇದೇ ಎಪ್ರಿಲ್ 1ರಿಂದ ಮೊದಲ ಹಂತದ ಎನ್ ಪಿಆರ್ ಮತ್ತು ಜನಗಣತಿಯು ಆರಂಭವಾಗಬೇಕಿತ್ತು. ಆದರೆ ಮುಂದಿನ 21 ದಿನಗಳ  ಕಾಲ ದೇಶಾದ್ಯಂತ ಲಾಕ್ ಡೌನ್ ಹೇರಿರುವ ಹಿನ್ನಲೆಯಲ್ಲಿ ಎನ್ ಪಿಆರ್ ಮತ್ತು ಜನಗಣತಿಯನ್ನು ಮುಂದೂಡಲಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವಾಲಯವು ಎನ್ ಪಿಆರ್ ಕುರಿತ ಸಿದ್ಧತೆ ಅಂತಿಮ ಹಂತದಲ್ಲಿದೆ ಎಂದು ಹೇಳಿತ್ತು.

ಕೊವಿಡ್‌–19 ಸೋಂಕು ಭೀತಿ ಹಿನ್ನೆಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಎನ್‌ಪಿಆರ್‌ನಂತಹ ಯೋಜನೆಗಳನ್ನು ಸರ್ಕಾರ ಮುಂದೂಡಬೇಕು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸರ್ಕಾರವನ್ನು ಇತ್ತೀಚೆಗೆ ಒತ್ತಾಯಿಸಿದ್ದವು. ಇದಕ್ಕೂ ಮೊದಲು ಬಿಜೆಪಿಯೇತರ  ಸರ್ಕಾರಗಳಿರುವ ಕೇರಳ, ಪಶ್ಚಿಮ ಬಂಗಾಳ, ಪಂಜಾಬ್, ರಾಜಸ್ಥಾನ, ಛತ್ತೀಸ್ ಘಡ ಮತ್ತು ಬಿಹಾರ ರಾಜ್ಯಗಳು ಎನ್ ಪಿಆರ್ ವಿರೋಧಿಸಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com