ಮಹಾಮಾರಿ ಕೊರೋನಾಗೆ ತಿರುಗುಬಾಣ ಹೆಚ್ಐವಿ ನಿರೋಧಕ ಡ್ರಗ್ಸ್, ಸೋಂಕಿತ ವ್ಯಕ್ತಿ ಚೇತರಿಕೆ!

ಮಹಾಮಾರಿ ಕೊರೋನಾ ಭಾರತದಲ್ಲಿ ತನ್ನ ಕರಾಳ ದೃಷ್ಟಿ ಬೀರುತ್ತಿದ್ದು ಸಾವಿನ ಸಂಖ್ಯೆ 18ಕ್ಕೇರಿದೆ. ಈ ಮಧ್ಯೆ ಕೊರೊನಾಗೆ ಹೆಚ್ಐವಿ ನಿರೋಧಕ ಡ್ರಗ್ಸ್ ಪರಿಣಾಮಕಾರಿ ಎಂಬ ಸಿಹಿ ಸುದ್ದಿ ಬಂದಿದೆ.
ಬ್ರಿಟನ್ ಪ್ರವಾಸಿಗರು
ಬ್ರಿಟನ್ ಪ್ರವಾಸಿಗರು

ಕೊಚ್ಚಿ: ಮಹಾಮಾರಿ ಕೊರೋನಾ ಭಾರತದಲ್ಲಿ ತನ್ನ ಕರಾಳ ದೃಷ್ಟಿ ಬೀರುತ್ತಿದ್ದು ಸಾವಿನ ಸಂಖ್ಯೆ 18ಕ್ಕೇರಿದೆ. ಈ ಮಧ್ಯೆ ಕೊರೊನಾಗೆ ಹೆಚ್ಐವಿ ನಿರೋಧಕ ಡ್ರಗ್ಸ್ ಪರಿಣಾಮಕಾರಿ ಎಂಬ ಸಿಹಿ ಸುದ್ದಿ ಬಂದಿದೆ. 

ಹೌದು ಕೇರಳದಲ್ಲಿ ಕೊರೋನಾದಿಂದ ಬಳಲುತ್ತಿದ್ದ ಬ್ರಿಟನ್ ಪ್ರಜೆಗೆ ಚಿಕಿತ್ಸೆಯಾಗಿ ಹೆಚ್ಐವಿ ನಿರೋಧಕ ಡ್ರಗ್ಸ್ ನೀಡಲಾಗಿದ್ದು ಇದೀಗ ರಿಪೋರ್ಟ್ ನಲ್ಲಿ ನೆಗೆಟಿವ್ ಎಂದು ಬಂದಿದೆ ಎಂದು ಎರ್ನಾಕುಲಂನ ಮೆಡಿಕಲ್ ಕಾಲೇಜು, ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. 

ಏಳು ದಿನಗಳ ಕಾಲ ಬ್ರಿಟನ್ ಪ್ರಜೆಗೆ ಹೆಚ್ಐವಿ ನಿರೋಧಕ ಡ್ರಗ್ಸ್ Ritonavir ಮತ್ತು Lopinavir ಕಾಂಬಿನೇಶನ್ ಡ್ರಗ್ಸ್ ನೀಡಲಾಗಿತ್ತು. ಇದೀಗ ರೋಗಿಯ ಸ್ಯಾಂಪಲ್ ಟೆಸ್ಟ್ ನಲ್ಲಿ ಕೋವಿಡ್ 19 ನೆಗೆಟಿವ್ ಬಂದಿದೆ. 

ಬ್ರಿಟನ್ ಪ್ರಜೆ ಜೊತೆಗೆ ಆತನ ಪತ್ನಿಯೂ ಕೂಡ ಹೆಚ್ಐವಿ ನಿರೋಧಕ ಡ್ರಗ್ಸ್ ನೀಡಲಾಗಿದ್ದು ಆಕೆಗೂ ಟೆಸ್ಟ್ ರಿಪೋರ್ಟ್ ನಲ್ಲಿ ನೆಗೆಟಿವ್ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com