ಏಪ್ರಿಲ್ 7 ರೊಳಗೆ ತೆಲಂಗಾಣ ಕೊರೋನಾ ಮುಕ್ತವಾಗುತ್ತದೆ: ಕೆಸಿ ಚಂದ್ರಶೇಖರ್ ರಾವ್

ರಾಜ್ಯದಲ್ಲಿ 70 ಕೊರೊನಾವೈರಸ್ ಸಕಾರಾತ್ಮಕ ಪ್ರಕರಣಗಳು ವರದಿಯಾಗಿದ್ದು, 11 ಗುಣಪಡಿಸಲಾಗಿದೆ ಮತ್ತು ಋಣಾತ್ಮಕ ಪರೀಕ್ಷೆ ಮಾಡಲಾಗಿದೆ. ಕಾರೋನಾವೈರಸ್ ನೆಗೆಟಿವ್ ಬಂದಿರುವವರನ್ನು ಸೋಮವಾರ ಡಿಸ್ಚಾರ್ಜ್ ಮಾಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಕೆಸಿ ಚಂದ್ರಶೇಖರ್ ರಾವ್
ಕೆಸಿ ಚಂದ್ರಶೇಖರ್ ರಾವ್

ಹೈದರಾಬಾದ್: ರಾಜ್ಯದಲ್ಲಿ 70 ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು,  ಅದರಲ್ಲಿ 11 ಗುಣಪಡಿಸಲಾಗಿದೆ. ಕೊರೋನಾ ವೈರಸ್ ನೆಗೆಟಿವ್ ಬಂದಿರುವವರನ್ನು ಸೋಮವಾರ ಡಿಸ್ಚಾರ್ಜ್ ಮಾಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವ್, "ಅಗತ್ಯವಿರುವ ಎಲ್ಲಾ  ಪರೀಕ್ಷೆಗಳನ್ನು ಮುಗಿಸಿ, ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

"ಇತರ ದೇಶಗಳಿಂದ ಬಂದ 25,937 ಜನರು ಸರ್ಕಾರದ ನಿಗಾದಲ್ಲಿದ್ದಾರೆ. ಈ ಜನರ ಕ್ವಾರಂಟೈನ್ ಏಪ್ರಿಲ್ 7 ರಂದು ಪೂರ್ಣಗೊಳ್ಳಲಿದೆ" ಎಂದು ಅವರು ಇದೇ ವೇಳೆ ತಿಳಿಸಿದರು.

ನಾಗರಿಕರಿಗೆ ತೊಂದರೆಯಾಗದಂತೆ ರೈತರಿಂದ ಹಣ್ಣು  ತರಕಾರಿ ಖರೀದಿಸಿ ನಗದರಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ ಅವರು ಹಣ್ಣುಗಳನ್ನು ಖರೀದಿಸಿಲು 500 ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com