ದೆಹಲಿಯ 68 ಮಂದಿ ಸಿಆರ್ ಪಿಎಫ್ ಯೋಧರಿಗೆ ಕೊರೋನಾ ಸೋಂಕು, ಒಟ್ಟು ಸೋಂಕಿತ ಯೋಧರ ಸಂಖ್ಯೆ 122ಕ್ಕೆ ಏರಿಕೆ

ಪೂರ್ವ ದೆಹಲಿಯಲ್ಲಿರುವ ಸಿಆರ್ ಪಿಎಫ್ ನ ಶಿಬಿರ ಕೇಂದ್ರದಲ್ಲಿ 68 ಮಂದಿ ಯೋಧರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಈ ಮೂಲಕ ಅಲ್ಲಿ ಕೊರೋನಾ ಸೋಂಕಿತ ಸಿಆರ್ ಪಿಎಫ್ ಸಿಬ್ಬಂದಿ ಸಂಖ್ಯೆ 122ಕ್ಕೇರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪೂರ್ವ ದೆಹಲಿಯಲ್ಲಿರುವ ಸಿಆರ್ ಪಿಎಫ್ ನ ಶಿಬಿರ ಕೇಂದ್ರದಲ್ಲಿ 68 ಮಂದಿ ಯೋಧರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಈ ಮೂಲಕ ಅಲ್ಲಿ ಕೊರೋನಾ ಸೋಂಕಿತ ಸಿಆರ್ ಪಿಎಫ್ ಸಿಬ್ಬಂದಿ ಸಂಖ್ಯೆ 122ಕ್ಕೇರಿದೆ.

ದೇಶದಲ್ಲಿರುವ ಸಿಆರ್ ಪಿಎಫ್ ನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 127ಕ್ಕೇರಿದೆ. ಓರ್ವ ಸಿಆರ್ ಪಿಎಫ್ ಯೋಧ ಗುಣಮುಖ ಹೊಂದಿದ್ದರೆ ಮತ್ತೊಬ್ಬರು ಹುತಾತ್ಮರಾಗಿದ್ದಾರೆ.ದೆಹಲಿಯ ಮಯೂರ್ ವಿಹಾರ್ ಮೂರನೇ ಹಂತದಲ್ಲಿರುವ 31ನೇ ಬೆಟಾಲಿಯನ್ ನ ಸಿಆರ್ ಪಿಎಫ್ ಸಿಬ್ಬಂದಿಯಾಗಿದ್ದಾರೆ.

ಈ ಮೊದಲು 55 ವರ್ಷದ ಸಿಆರ್ ಪಿಎಫ್ ಸಿಬ್ಬಂದಿ ದೆಹಲಿಯಲ್ಲಿ ಕೊರೋನಾ ವೈರಸ್ ಗೆ ಹುತಾತ್ಮರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com