ಕಂಟೈನ್ ಮೆಂಟ್ ಜೋನ್ ಅಲ್ಲದ ಪ್ರದೇಶಗಳಲ್ಲಿ ಲಾಕ್ ಡೌನ್ ಸಡಿಲಿಸಿದ ತಮಿಳುನಾಡು

ಕೊವಿಡ್-19 ಲಾಕ್ ಡೌನ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ನೀಡಿದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕಂಟೈನ್ ಮೆಂಟ್ ಜೋನ್ ಅಲ್ಲದ ಪ್ರದೇಶಗಳಲ್ಲಿ ಲಾಕ್ ಡೌನ್ ಅನ್ನು ಸಡಿಲಗೊಳಿಸಿ ಶನಿವಾರ ಆದೇಶಿಸಿದೆ.
ಪಳನಿಸ್ವಾಮಿ
ಪಳನಿಸ್ವಾಮಿ

ಚೆನ್ನೈ: ಕೊವಿಡ್-19 ಲಾಕ್ ಡೌನ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ನೀಡಿದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕಂಟೈನ್ ಮೆಂಟ್ ಜೋನ್ ಅಲ್ಲದ ಪ್ರದೇಶಗಳಲ್ಲಿ ಲಾಕ್ ಡೌನ್ ಅನ್ನು ಸಡಿಲಗೊಳಿಸಿ ಶನಿವಾರ ಆದೇಶಿಸಿದೆ.

ಕಂಟೈನ್ ಮೆಂಟ್ ಜೋನ್ ಬಿಟ್ಟು ಉಳಿದ ಪ್ರದೇಶಗಳಲ್ಲಿ ಮೇ 4ರಿಂದ ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ ಕಾಮಗಾರಿ, ಶೇ. 20 ರಿಂದ 25 ರಷ್ಟು ನೌಕರರೊಂದಿಗೆ ಎಸ್ಇಝೆಡ್ ಆರಂಭಿಸಲು ಅನುಮತಿ ನೀಡಲು ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಐಟಿ ಕಂಪನಿಗಳು ಸಹ 20 ಉದ್ಯೋಗಿಳೊಂದಿಗೆ ಅಥವಾ ಶೇ.10 ರಷ್ಟು ಸಿಬ್ಬಂದಿಯೊಂದಿಗೆ ಕಚೇರಿ ಆರಂಭಿಸಬಹುದು ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಎಂದಿನಂತೆ ಅಗತ್ಯ ವಸ್ತುಗಳು ಬೆಳಗ್ಗೆ 6ರಿಂದ ಸಂಜೆ 5 ಗಂಟೆಯವರೆಗೆ ದೊರೆಯಲಿವೆ. ಸಲೂನ್, ಬ್ಯೂಟಿ ಪಾರ್ಲರ್ ಗಳನ್ನು ನಿರ್ಬಂಧಿಸಲಾಗಿದೆ.

ಈ ಮಧ್ಯೆ ಚೆನ್ನೈನಲ್ಲಿ 174 ಪ್ರಕರಣಗಳು ಸೇರಿದಂತೆ ತಮಿಳುನಾಡಿನಲ್ಲಿ ಇಂದು ಹೊಸದಾಗಿ 231 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2757ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com