ಚೆನ್ನೈ: ಕರ್ತವ್ಯನಿರತ ಐಪಿಎಸ್ ಅಧಿಕಾರಿಗೆ ಕೊವಿಡ್-19 ಪಾಸಿಟಿವ್

ತಮಿಳುನಾಡಿನಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸೋಮವಾರ ಚೆನ್ನೈ ಉಪ ಪೊಲೀಸ್ ಆಯುಕ್ತರೊಬ್ಬರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ತಮಿಳುನಾಡಿನಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸೋಮವಾರ ಚೆನ್ನೈ ಉಪ ಪೊಲೀಸ್ ಆಯುಕ್ತರೊಬ್ಬರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ ನಂತರ ಕೊಯಂಬೆಡು ಮಾರುಕಟ್ಟೆಯ ಉಸ್ತುವಾರಿ ವಹಿಸಿಕೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿಗೆ ಇಂದು ಕೊವಿಡ್-19 ಪಾಸಿಟಿವ್ ಬಂದಿದೆ.

ಈ ಅಧಿಕಾರಿಗೆ ಕೊರೋನಾ ಹೇಗೆ ಬಂತು ಎಂಬುದು ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಅಧಿಕಾರಿಯ ಕುಟುಂಬಸ್ಥರನ್ನು ಮತ್ತು ಅವರ ಸಂಪರ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಈ ಮಧ್ಯೆ, ಗುಪ್ತಚರ ಇಲಾಖೆಯ ಇತರೆ ನಾಲ್ವರು ಪೊಲೀಸರಿಗೆ, ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಾಹನದ ಇಬ್ಬರು ಚಾಲಕರಿಗೆ, ಮತ್ತೊಬ್ಬ ಡಿಸಿಪಿ ವಾಹನದ ಚಾಲಕನಿಗೂ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com