
ಮಿಗ್-29 ಯುದ್ಧ ವಿಮಾನ ಪತನ
ಚಂಡೀಘಡ: ಭಾರತೀಯ ವಾಯುಸೇನೆಗೆ ಸೇರಿದೆ ಮಿಗ್-29 ಯುದ್ಧ ವಿಮಾನ ಇಂದು ಬೆಳಗ್ಗೆ ಪಂಜಾಬ್ ನಲ್ಲಿ ಪತನವಾಗಿದೆ ಎಂದು ತಿಳಿದುಬಂದಿದೆ.
ಪಂಜಾಬ್ ನ ನವಾನ್ ಶಹರ್ ನಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಯುದ್ಧ ವಿಮಾನ ಪತನಕ್ಕೂ ಮುನ್ನ ಪೈಲಟ್ ಪ್ಯಾರಾಚೂಟ್ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿರ್ಜನ ಪ್ರದೇಶದಲ್ಲಿ ವಿಮಾನಪತನವಾಗಿದ್ದರಿಂದ ಹೆಚ್ಚಿನ ಸಾವು-ನೋವು ಸಂಭವಿಸಿಲ್ಲ. ಪ್ರಸ್ತುತ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ದೌಡಾಯಿಸಿದ್ದು, ಪೈಲಟ್ ರನ್ನು ರಕ್ಷಿಸಿದ್ದಾರೆ. ಅಂತೆಯೇ ವಾಯುಸೇನೆಯ ಉನ್ನತಾಧಿಕಾರಿಗಳು ಕೂಡ ಅಪಘಾತ ಸ್ಥಳಕ್ಕೆ ಆಗಮಿಸುತ್ತಿದ್ದು, ಅಪಘಾತ ಮಾಹಿತಿ ಪಡೆಯಲಿದ್ದಾರೆ.
ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರಬಹುದು ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
An Indian Air Force fighter aircraft has crashed in Punjab. More details awaited. pic.twitter.com/HT6hIvJ0oz
— ANI (@ANI) May 8, 2020