ಜಮ್ಮು ಕಾಶ್ಮೀರ: 5 ತಿಂಗಳಲ್ಲಿ 3 ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥರ ಸೇರಿದಂತೆ 64 ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ತಿಂಗಳುಗಳಲ್ಲಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥರು ಸೇರಿದಂತೆ ಒಟ್ಟು 64 ಉಗ್ರರನ್ನು ಹತ್ಯೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ತಿಂಗಳುಗಳಲ್ಲಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥರು ಸೇರಿದಂತೆ ಒಟ್ಟು 64 ಉಗ್ರರನ್ನು ಹತ್ಯೆ ಮಾಡಿದೆ. 

ಕಳೆದ ಜನವರಿ ತಿಂಗಳಿನಿಂದಲೂ ಸೇನಾಪಡೆಗಳು ಉಗ್ರರ ವಿರುದ್ಧ 27 ಕಾರ್ಯಾಚರಣೆಗಳನ್ನು ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಪ್ರಮುಖ ಮುಖ್ಯಸ್ಥರಾಗಿದ್ದ ಕ್ವಾರಿ ಯಾಸಿರ್, ಬುರ್ಹಾನ್ ಕೊಕಾ, ರಿಯಾಜ್ ನಾಯ್ಕೂ ಎಂಬುವವರನ್ನು ಹತ್ಯೆ ಮಾಡಿದೆ. 

ಈ ಕುರಿತು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾನತಾಡಿದ್ದು, ಕಾರ್ಯಾಚರಣೆ ವೇಳೆ 150 ಮಂದಿ ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿದ್ದಾರೆ. 

ಬುಧವಾರ ಅವಂತಿಪೋರಾದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ರಿಯಾಲ್ ನಾಯ್ಕೂ ಹತ್ಯೆ ಮಾಡಿದ್ದು, ಸೇನೆಗೆ ದೊಡ್ಡ ಯಶಸ್ಸನ್ನೇ ತಂದುಕೊಟ್ಟಿದೆ. ಕಳೆದ 6 ತಿಂಗಳಿನಿಂದಲೂ ಆತನ ಚಟುವಟಿಕೆಗಳ ಮೇಲೆ ಸೇನೆ ಕಣ್ಗಾವಲಿರಿಸಿತ್ತು. ಆತನಿರುವ ಸ್ಥಳ ಖಚಿತವಾಗುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿ, ಹೊಡೆದುರುಳಿಸಲಾಯಿತು. ಪ್ರಸ್ತುತ ಹತ್ಯೆಯಾದ ನಾಯ್ಕೂ ಯುವಕರನ್ನು ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳುವಂತೆ ಪ್ರೇರೇಪಿಸುತ್ತಿದ್ದ. 

ಯುವಕರನ್ನು ಪ್ರೇರೇಪಿಸಲು ತಿಂಗಳು ಹಾಗೂ 2 ತಿಂಗಳಿಗೊಮ್ಮೆ ವಿಡಿಯೋ ಬಿಡುಗಡೆ ಮಾಡುತ್ತಿದ್ದ, ಈತನನ್ನು ಹತ್ಯೆ ಮಾಡಿದ ಬಳಿಕ ಸ್ಥಳದಲ್ಲಿ ಕೆಲ ಕಾಲ ಘರ್ಷಣೆಗಳು ಏರ್ಪಟ್ಟಿದ್ದವು. ಸ್ಥಳೀಯರು ಸೇನಾಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಆಗಸ್ಟ್ 5 ರ ಬಳಿಕ ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಧಕ್ಕೆ ಎದುರಾಗಿದೆ. ಘಟನೆಯಲ್ಲಿ ಕೆಲ ಸ್ಥಳೀಯರು ಗಾಯಗೊಂಡಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರಲು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವುದು ಅಗತ್ಯವಿತ್ತು. 

ಜನರನ್ನು ದಂಗೆ ಏಳುವಂತ ಮಾಡಲು ಕೆಲವರು ಇಂಟರ್ನೆಟ್ ಸೇವೆಗಳ ಮೂಲಕ ಹಳೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಸಾಧ್ಯತೆಗಳಿವೆ. ಹೀಗಾಗಿ ಇಂತಹ ಕಠಿಣ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹತ್ಯೆಯಾಗಿರುವ ಉಗ್ರರ ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com