ದಯವಿಟ್ಟು ಮೇ.31 ವರೆಗೆ ತಮಿಳುನಾಡಿಗೆ ಯಾವುದೇ ರೈಲುಗಳೂ ಬೇಡ: ಮೋದಿಗೆ ಸಿಎಂ ಮನವಿ 

ತಿಂಗಳಾಂತ್ಯದವರೆಗೆ ತಮಿಳುನಾಡಿಗೆ ಯಾವುದೇ ರೈಲುಗಳ ಸಂಪರ್ಕವನ್ನೂ ಕಲ್ಪಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮನವಿ ಮಾಡಿದ್ದಾರೆ. 

Published: 11th May 2020 10:52 PM  |   Last Updated: 11th May 2020 10:52 PM   |  A+A-


Tamil Nadu CM Palaniswamy

ತಮಿಳುನಾಡು ಸಿಎಂ ಪಳನಿಸ್ವಾಮಿ

Posted By : Srinivas Rao BV
Source : PTI

ನವದೆಹಲಿ: ತಿಂಗಳಾಂತ್ಯದವರೆಗೆ ತಮಿಳುನಾಡಿಗೆ ಯಾವುದೇ ರೈಲುಗಳ ಸಂಪರ್ಕವನ್ನೂ ಕಲ್ಪಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮನವಿ ಮಾಡಿದ್ದಾರೆ. 

ಮೇ.11 ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪಳನಿಸ್ವಾಮಿ ಮನವಿ ಮಾಡಿದ್ದು, ತಮಿಳುನಾಡು ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ಕಾರಣದಿಂದ ತಿಂಗಳಾಂತ್ಯದವರೆಗೆ ರಾಜ್ಯಕ್ಕೆ ರೈಲುಗಳ ಸಂಚಾರ ಕಲ್ಪಿಸುವುದು ಬೇಡ, ವಿಮಾನ ಸೌಲಭ್ಯಗಳನ್ನೂ ಕಲ್ಪಿಸುವುದು ಬೇಡ ಎಂದು ಹೇಳಿದ್ದಾರೆ. 

ತಮಿಳುನಾಡಿನಲ್ಲಿ ಈವರೆಗೂ 7,000 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 

ರೈಲ್ವೆ ಇಲಾಖೆ ಕಡಿಮೆ ಪ್ರಮಾಣದಲ್ಲಿ ರೈಲುಗಳ ಸಂಚಾರವನ್ನು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಗಳಿಗೆ ತಮಿಳುನಾಡು ಸಿಎಂ ಮನವಿ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp