ಕೊರೋನಾ ವೈರಸ್ ಪರಿಹಾರಕ್ಕೆ ದೇಣಿಗೆ: ಭಾರತದ ಅಜೀಂ ಪ್ರೇಮ್ ಜಿಗೆ ವಿಶ್ವದಲ್ಲೇ 3ನೇ ಸ್ಥಾನ

ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆರ್ಭಟಿಸುತ್ತಿರುವ ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕೆ ಗರಿಷ್ಠ ದೇಣಿಗೆ ನೀಡಿದ ಜಗತ್ತಿನ ಉದ್ಯಮಿಗಳ ಪಟ್ಟಿಯಲ್ಲಿ ಭಾರತದ ಖ್ಯಾತ ಉದ್ಯಮಿ ಮತ್ತು ವಿಪ್ರೋ ಸಂಸ್ಥಾಪಕ ಅಜೀಮ್ ಪ್ರೇಮ್ ಜಿ 3ನೇ ಸ್ಥಾನದಲ್ಲಿದ್ದಾರೆ.
ಅಜೀಂ ಪ್ರೇಮ್ ಜಿ
ಅಜೀಂ ಪ್ರೇಮ್ ಜಿ

ನವದೆಹಲಿ: ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆರ್ಭಟಿಸುತ್ತಿರುವ ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕೆ ಗರಿಷ್ಠ ದೇಣಿಗೆ ನೀಡಿದ ಜಗತ್ತಿನ ಉದ್ಯಮಿಗಳ ಪಟ್ಟಿಯಲ್ಲಿ ಭಾರತದ ಖ್ಯಾತ ಉದ್ಯಮಿ ಮತ್ತು ವಿಪ್ರೋ ಸಂಸ್ಥಾಪಕ ಅಜೀಮ್ ಪ್ರೇಮ್ ಜಿ 3ನೇ ಸ್ಥಾನದಲ್ಲಿದ್ದಾರೆ.

ಹೌದು.. ಭಾರತ ಸೇರಿದಂತೆ ಇಡೀ ಜಗತ್ತೇ ಕೊರೋನಾವೈದಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುತ್ತಿದ್ದು, ಈ ಹೋರಾಟದಲ್ಲಿ ದೇಣಿಗೆ ನೀಡುವ ಮೂಲಕ ಜಗತ್ತಿನ ಖ್ಯಾತನಾಮ ಉದ್ಯಮಿಗಳು ಕೈ ಜೋಡಿಸಿದ್ದಾರೆ. ಈ ಪಟ್ಟಿಯಲ್ಲಿ ಅತೀ ಹೆಚ್ಚಿನ ಪ್ರಮಾಣದ ದೇಣಿಗೆ  ನೀಡಿದ ಉದ್ಯಮಿಗಳ ಪೈಕಿ ಭಾರತದ ಅಜೀಮ್ ಪ್ರೇಮ್ ಜೀ ಮೂರನೇ ಸ್ಥಾನದಲ್ಲಿದ್ದಾರೆ. ಅಜೀಮ್ ಪ್ರೇಮ್ ಜೀ ಅವರು, ಏಪ್ರಿಲ್ ತಿಂಗಳ ಆರಂಭದಲ್ಲೇ 1,125 ಕೋಟಿಗಳನ್ನು ಕೊರೋನಾ ವಿರುದ್ಧ ಹೋರಾಡಲು ನೀಡಿದ್ದರು. 1,125 ಕೋಟಿ ರೂಪಾಯಿಗಳ ಪೈಕಿ ಅಜೀಂ ಪ್ರೇಮ್‌ ಜಿ  ಫೌಂಡೇಶನ್ 1000 ಕೋಟಿ ರೂಪಾಯಿಗಳನ್ನು ಮತ್ತು ವಿಪ್ರೋ ರೂಪಾಯಿಗಳನ್ನು ನೀಡಿತ್ತು. ವಿಪ್ರೋ ಉದ್ದಿಮೆಗಳು 25 ಕೋಟಿಗಳನ್ನು ನೀಡುವ ಭದ್ರತೆಯನ್ನು ತೋರಿಸಿತ್ತು.

ಈ ಕುರಿತಂತೆ ಖ್ಯಾತ ನಿಯತಕಾಲಿಕೆ ಫೋರ್ಬ್ಸ್ ಪಟ್ಟಿ ಮಾಡಿದ್ದು, ಅತೀ ಹೆಚ್ಚು ದೇಣಿಗೆ ನೀಡಿದ ಖ್ಯಾತನಾಮ ಉದ್ಯಮಿಗಳ ಪಟ್ಟಿ ತಯಾರಿಸಿದೆ. ಈ ಪಟ್ಟಿಯಲ್ಲಿ ಅಜೀಂ ಪ್ರೇಮ್ ಜಿ ಅವರು ಅತೀ ಹೆಚ್ಚು ದೇಣಿಗೆ ನೀಡಿದ ಭಾರತದ ಮೊದಲ ವಿಶ್ವದ ಮತ್ತು ವಿಶ್ವದ ಮೂರನೇ ಉದ್ಯಮಿ  ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಫೋರ್ಬ್ಸ್ ನ 10 ಉದ್ಯಮಿಗಳ ಪಟ್ಟಿಯಲ್ಲಿ ಅಜೀಂ ಪ್ರೇಮ್ ಜಿ ಭಾರತದ ಏಕೈಕ ಉದ್ಯಮಿಯಾಗಿದ್ದು, ಉಳಿದವರೆಲ್ಲರೂ ಅಮೆರಿಕನ್ನರಾಗಿದ್ದಾರೆ. 

ಫೋರ್ಬ್ಸ್ ಪಟ್ಟಿಯ ಪ್ರಕಾರ ವಿಶ್ವದ 77 ಮಂದಿ ಬಿಲಿಯನೇರ್­‌ಗಳು ಏಪ್ರಿಲ್ ಅಂತ್ಯದ ವೇಳೆಗೆ ಕೊರೋನಾ ವಿರುದ್ಧ ಹೋರಾಡಲು ದೇಣಿಗೆ ನೀಡಿದ್ದಾರೆ. ರೂ.7,549 ಕೋಟಿಗಳನ್ನು ನೀಡಿರುವ ಟ್ವಿಟರ್ ಸಿಇಓ ಜಾಕ್ ಡೋರ್ಸೆ ಅವರು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com