ಸಬ್ ಇನ್ಸ್ ಪೆಕ್ಟರ್ ಗೆ ಕೊರೋನಾ: ರೂಂ ಸ್ಯಾನಿಟೈಸ್ ಮಾಡಿಸಿಲ್ಲ ಎಂದು ಡಿಸಿಪಿ ಮೇಲೆ 500 ಪೊಲೀಸ್ ಪೇದೆಗಳಿಂದ ಹಲ್ಲೆ!

ಪೊಲೀಸ್ ವ್ಯವಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬಂತೆ ಸುಮಾರು 500 ಮಂದಿ ಪೊಲೀಸ್ ಪೇದೆಗಳು ಸೇರಿಕೊಂಡು ತಮ್ಮ ವರಿಷ್ಠಾಧಿಕಾರಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ.
ಡಿಸಿಪಿ ಮೇಲೆ ಹಲ್ಲೆ
ಡಿಸಿಪಿ ಮೇಲೆ ಹಲ್ಲೆ

ಕೋಲ್ಕತಾ: ಪೊಲೀಸ್ ವ್ಯವಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬಂತೆ ಸುಮಾರು 500 ಮಂದಿ ಪೊಲೀಸ್ ಪೇದೆಗಳು ಸೇರಿಕೊಂಡು ತಮ್ಮ ವರಿಷ್ಠಾಧಿಕಾರಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ಹೌದು.. ಅಂಫಾನ್ ಚಂಡಮಾರುತ ಹಿನ್ನಲೆಯಲ್ಲಿ ನಿಯೋಜನೆಯಾಗಿರುವ ಸುಮಾರು 500 ಮಂದಿ ಪೊಲೀಸ್ ಪೇದೆಗಳು ತಮ್ಮ ರೂಂ ಮತ್ತು ಬರಾಕ್ ಅನ್ನು ಸ್ಯಾನಿಟೈಸ್ ಮಾಡಿಸಿಲ್ಲ ಎಂದು ಆಕ್ರೋಶಗೊಂಡು ತಮ್ಮ ವರಿಷ್ಠಾಧಿಕಾರಿ ಡಿಸಿಪಿ ಮೇಲೆ ಹಲ್ಲೆ ಮಾಡಿದ್ದಾರೆ. ಕರ್ತವ್ಯ  ನಿಯೋಜನೆಯಾಗಿದ್ದ ಸಬ್ ಇನ್ಸ್ ಪೆಕ್ಟರ್ ಗೆ ಕೊರೋನಾ ವೈರಸ್ ಸೋಂಕು ತಗುಲಿತ್ತು. ಇದಾದ ಬಳಿಕ ಮತ್ತೆ ಮೂವರಲ್ಲಿ ಸೋಂಕು ಕಾಣಿಸಿತ್ತು. ಬಳಿಕ ಇನ್ಸ್ ಪೆಕ್ಟರ್ ತಂಗಿದ್ದ ಬರಾಕ್ ಅನ್ನು ಸ್ಯಾನಿಟೈಸ್ ಮಾಡಿಸಿರಲಿಲ್ಲ. ಅಲ್ಲದೆ ಇದೇ ಬರಾಕ್ ನಲ್ಲಿ ತಂಗಿದ್ದ ಇತರೆ ಪೊಲೀಸರಿಗೂ  ಕನಿಷ್ಠ ಸುರಕ್ಷತೆಯ ಮಾನದಂಡಗಳನ್ನೂ ಪಾಲಿಸಿರಲಿಲ್ಲ. ಇದರಿಂದ ತೀವ್ರ ಆಕ್ರೋಶಗೊಂಡ ಪೊಲೀಸ್ ಪೇದೆಗಳು ಕೋಲ್ಕತಾದ ಎಜೆಸಿ ಬೋಸ್ ರಸ್ತೆಯಲ್ಲಿರುವ ಡಿಸಿಪಿ ಕಚೇರಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದರು.

ತಮಗೆ ಮಾಸ್ಕ್ ಆಗಲಿ, ಸ್ಯಾನಿಟೈಸರ್ ಆಗಿಲಿ ಯಾವುದೈ ರೀತಿಯ ಕನಿಷ್ಠ ಮಟ್ಟದ ಸುರಕ್ಷತೆಯನ್ನೂ ವ್ಯವಸ್ಥೆ ಮಾಡಿಲ್ಲ. ಹೋಗಲಿ ಸಬ್ ಇನ್ಸ್ ಪೆಕ್ಟರ್ ತಂಗಿದ್ದ ಬರಾಕ್ ಸೇರಿದಂತೆ ಕಟ್ಟಡದ ಯಾವೊಂದು ಪ್ರದೇಶವನ್ನೂ ಸ್ಯಾನಿಟೈಸ್ ಮಾಡಿಸಿಲ್ಲ. ನಾವು ನಿತ್ಯ ಕಂಟೈನ್ ಮೆಂಟ್  ಝೋನ್ ಗಳಲ್ಲಿ ಕಾರ್ಯ ನಿರ್ವಹಿಸುತ್ತೇವೆ. ಪರಿಸ್ಥಿತಿ ಹೀಗಿರುವಾಗ ಕನಿಷ್ಠ ಸುರಕ್ಷತೆಯನ್ನಾದರೂ ನೀಡಬೇಕಲ್ಲವೇ ಎಂದು ಪೇದೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೇದೆಗಳು ಮತ್ತು  ಡಿಸಿಪಿ ಎನ್ ಪೌಲ್ ನಡುವೆ ಮಾತಿನ ಚಕಮಕಿ ನಡೆದಿದ್ದು, ವಾಕ್ಸಮರ ತಾರಕಕ್ಕೇರಿ  ಪೇದೆಗಳು ಡಿಸಿಪಿ ಮೇಲೆ ಹಲ್ಲೆ ಮಾಡಿದ್ದಾರೆ.

ಇನ್ನು ಪ್ರಸ್ತುತ ಪೇದೆಗಳಿಂದ ಮಾರಣಾಂತಿಕ ಹಲ್ಲೆಗೊಳಗಾದ ಡಿಸಿಪಿ ಪೌಲ್ ರನ್ನು ಕೆಲ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 

ಈ ಕುರಿತಂತೆ ಮಾಹಿತಿ ನೀಡಿರುವ ಕೋಲ್ಕತಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೇದೆಗಳು ಮತ್ತು  ಡಿಸಿಪಿ ಎನ್ ಪೌಲ್ ನಡುವೆ ಮಾತಿನ ಚಕಮಕಿ ನಡೆದಿದ್ದು, ವಾಕ್ಸಮರ ತಾರಕಕ್ಕೇರಿ ಪೇದೆಗಳು ಡಿಸಿಪಿ ಮೇಲೆ ಹಲ್ಲೆ ಮಾಡಿದ್ದಾರೆ. ಪೇದೆಗಳಿಂದ ತಪ್ಪಿಸಿಕೊಳ್ಳಲು ಪೌಲ್  ಪ್ರಯತ್ನಿಸಿದರಾದರೂ ಅವರನ್ನು ಬೆನ್ನಟ್ಟಿ ಪೇದೆಗಳು ಹೊಡೆದಿದ್ದಾರೆ ಎಂದು ಹೇಳಿದರು.

ಇನ್ನು ಪೊಲೀಸ್ ಪೇದೆಗಳನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಭೇಟಿ ಮಾಡಿ ಅವರನ್ನು ಸಂತೈಸುವ ಕಾರ್ಯ ಮಾಡಿದ್ದಾರೆ. ಅಲ್ಲದೆ ಪೇದೆಗಳ ಬೇಡಿಕೆ ಇಡೇರಿಸುವ ಕುರಿತು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ತಿಳಿದುಬಂದಿದೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com