ಕೊರೋನಾಘಾತದ ನಡುವೆಯೇ ಸಮಾಧಾನದ ಸಂಗತಿ; 24 ಗಂಟೆಗಳಲ್ಲಿ ದೇಶದಲ್ಲಿ 11,264 ಸೋಂಕಿತರು ಗುಣಮುಖ

ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಅತ್ತ ದೆಹಲಿಯಿಂದ ಸಮಾಧಾನದ ಸಂಗತಿಯೊಂದು ಬಂದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,264 ಸೋಂಕಿತರು ಗುಣಮುಖರಾಗಿದ್ದಾರೆ ಎಂಬ ಮಾಹಿತಿ ಬಂದಿದೆ.
ಗುಣಮುಖರಾದ ಕೊರೋನಾ ಸೋಂಕಿತರು
ಗುಣಮುಖರಾದ ಕೊರೋನಾ ಸೋಂಕಿತರು

ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಅತ್ತ ದೆಹಲಿಯಿಂದ ಸಮಾಧಾನದ ಸಂಗತಿಯೊಂದು ಬಂದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,264 ಸೋಂಕಿತರು ಗುಣಮುಖರಾಗಿದ್ದಾರೆ ಎಂಬ ಮಾಹಿತಿ ಬಂದಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 11,264 ಕೋವಿಡ್-19 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದು ಒಂದು ದಿನದಲ್ಲಿ ಅತಿ ಹೆಚ್ಚು ಚೇತರಿಸಿಕೊಂಡ ರೋಗಿಗಳ ಪ್ರಮಾಣ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.  ಅಂತೆಯೇ ಆ ಮೂಲಕ ದೇಶದಲ್ಲಿ ಚೇತರಿಕೆಯ ದರ ಗಣನೀಯ ಪ್ರಮಾಣದಲ್ಲಿ ಸುಧಾರಣೆಯಾಗಿದ್ದು, ಪ್ರಸ್ತುತ ಚೇತರಿಕೆಯ ಪ್ರಮಾಣ ಶೇ 47.40 ರಷ್ಟು ಎನ್ನಲಾಗಿದೆ. 

ಈ ಹಿಂದಿನ ದಿನದ ಚೇತರಿಕೆ ದರಕ್ಕಿಂತ ಶೇ 4.51 ರಷ್ಟು ಹೆಚ್ಚಾಗಿದೆ. ಆ ಮೂಲಕ ದೇಶದಲ್ಲಿ ಒಟ್ಟು ಗುಣಮುಖರಾದ ಕೋವಿಡ್ -19 ಸೋಂಕಿತರ ಸಂಖ್ಯೆ ಈಗ 82,369 ಆಗಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಚೇತರಿಸಿಕೊಂಡ ರೋಗಿಗಳ ಕಾರಣದಿಂದಾಗಿ, ಸಕ್ರಿಯ ರೋಗಿಗಳ ಸಂಖ್ಯೆ ಮೇ  29 ರಂದು 89,987 ರೋಗಿಗಳಿಂದ 86,422 ಸಕ್ರಿಯ ಪ್ರಕರಣಗಳಿಗೆ ಇಳಿದಿದೆ. ಎಲ್ಲಾ ಸಕ್ರಿಯ ಪ್ರಕರಣಗಳು ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿವೆ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್ -19 ರ ದ್ವಿಗುಣಗೊಳಿಸುವ ಸಮಯದ ವಿವರಗಳನ್ನು ನೀಡಿದ ಸಚಿವಾಲಯವು ಕಳೆದ 14 ದಿನಗಳಲ್ಲಿ 13.3 ರಿಂದ ಕಳೆದ ಮೂರು ದಿನಗಳಲ್ಲಿ 15.4 ಕ್ಕೆ ಏರಿದ್ದು.  ಕೋವಿಡ್-19ರ ಸಾವಿನ ಪ್ರಮಾಣ ಶೇ 2.86ಕ್ಕೆ ಕುಸಿದಿದೆ. ಇದು ವಿಶ್ವದ ಯಾವುದೇ ರಾಷ್ಟ್ರಗಳಿಗಿಂತ  ಅತ್ಯಂತ ಕೆಳಮಟ್ಟದಲ್ಲಿದೆ. 2020 ರ ಮೇ 29 ರ ಹೊತ್ತಿಗೆ, ಐಸಿಯುನಲ್ಲಿ ಶೇ 2.55 ಸಕ್ರಿಯ ಸೋಂಕಿತರು, ವೆಂಟಿಲೇಟರ್‌ಗಳಲ್ಲಿ ಶೇ 0.48 ಮತ್ತು ಆಮ್ಲಜನಕದ ಸಹಾಯದ ಮೇಲೆ  ಶೇ 1.96 ರಷ್ಟು ರೋಗಿಗಳಿದ್ದಾರೆ ಎಂದು ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com