ಟಲೋಜ ಜೈಲಿಗೆ ಅರ್ನಾಬ್ ಗೋಸ್ವಾಮಿ ಸ್ಥಳಾಂತರ! 

ವಾಸ್ತುಶಿಲ್ಪಿ ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಿಪಬ್ಲಿಕ್ ಟಿವಿ ಮಾಲೀಕ ಮತ್ತು ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅಲಿಬಾಗ್ ಕ್ವಾರಂಟೈನ್ ಕೇಂದ್ರದಲ್ಲಿ ಮೊಬೈಲ್ ಉಪಯೋಗಿಸಿದ್ದಕ್ಕೆ  ಟಲೋಜ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಅರ್ನಾಬ್ ಗೋಸ್ವಾಮಿ
ಅರ್ನಾಬ್ ಗೋಸ್ವಾಮಿ

ಮುಂಬೈ: ವಾಸ್ತುಶಿಲ್ಪಿ ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಿಪಬ್ಲಿಕ್ ಟಿವಿ ಮಾಲೀಕ ಮತ್ತು ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ, ಅಲಿಬಾಗ್ ಕ್ವಾರಂಟೈನ್ ಕೇಂದ್ರದಲ್ಲಿ ಮೊಬೈಲ್ ಉಪಯೋಗಿಸಿದ್ದಕ್ಕೆ  ಟಲೋಜ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ನವೆಂಬರ್ ನಾಲ್ಕರಿಂದ ನ್ಯಾಯಾಂಗ ಬಂಧನದಲ್ಲಿರುವ ಗೋಸ್ವಾಮಿ  ವಿರುದ್ಧದ  ಎಫ್ ಐಆರ್ ನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿದೆ. 

 ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ವಿಚಾರಣಾಧಿಕಾರಿ ಜಮಿಲ್ ಶೇಖ್, ವೋರ್ಲಿಯಲ್ಲಿನ ನಿವಾಸದಲ್ಲಿ ಬುಧವಾರ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿದ ನಂತರ ಅವರ ಬಳಿಯಿದ್ದ ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿತ್ತು. ಆದಾಗ್ಯೂ. ಇನ್ನೊಂದು ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವುದಾಗಿ ಕಂಡುಬಂದಿದೆ ಎಂದರು.

ಕ್ವಾರಂಟೈನ್ ಕೇಂದ್ರದಲ್ಲಿ ಹೇಗೆ ಫೋನ್ ಬಳಸಲು ಅವಕಾಶ ನೀಡಲಾಯಿತು ಎಂಬುದವರ ವರದಿ ನೀಡುವಂತೆ ಅಲಿಬಾಗ್ ಕಾರಾಗೃಹ ಮಹಾನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಆದ್ದರಿಂದ ಇಂದು ಬೆಳ್ಳಗೆ ಟಲೋಜ ಜೈಲಿಗೆ ಅರ್ನಾಬ್ ಗೋಸ್ವಾಮಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದರು. 

ಈ ಮಧ್ಯೆ ಪೊಲೀಸ್ ಬೆಂಗಾವಲು ವಾಹನದ ಮಧ್ಯೆ ರಿಪಬ್ಲಿಕ್ ಚಾನೆಲ್ ಜೊತೆ ಮಾತನಾಡಿದ ಅರ್ನಾಬ್ ಗೋಸ್ವಾಮಿ, ತನ್ನ ಜೀವನ ಅಪಾಯದಲ್ಲಿದೆ. ಜಾಮೀನು ನೀಡಬೇಕು, ತನ್ನ ಮೇಲೆ ಹಲ್ಲೆ ನಡೆದಿದ್ದು, ವಕೀಲರೊಂದಿಗೆ ಮಾತನಾಡಲು ಬಿಡುತ್ತಿಲ್ಲ ಎಂದು ಹೇಳಿದರು.

ಒಂದು ವೇಳೆ ಗೋಸ್ವಾಮಿಗೆ ಜಾಮೀನು ನೀಡಿದರೆ ಸಂತ್ರಸ್ಥರ ಕುಟುಂಬವನ್ನು ನಾಶಪಡಿಸುತ್ತಾನೆ. ಗೋಸ್ವಾಮಿ ಈಗಾಗಲೇ ನಾಯಕ್ ಕುಟುಂಬಕ್ಕೆ ಬೆದರಿಕೆ, ಕಿರುಕುಳ ನೀಡಿದ್ದು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರೆಂದು ನಾಯಕ ಕುಟುಂಬ ಪರ ವಾದಿಸುತ್ತಿರುವ ಹಿರಿಯ ವಕೀಲ ಸಿರಿಶ್ ಗುಪ್ಟೆ ಹೇಳಿದ್ದಾರೆ. ಗೋಸ್ವಾಮಿ ಮತ್ತಿತರ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿ ಕುರಿತ ತೀರ್ಪನ್ನು ಬಾಂಬೆ ಹೈಕೋರ್ಟ್ ನಾಳೆ ಪ್ರಕಟಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com