ಮುಂಬೈ ವಿಮಾನ ನಿಲ್ದಾಣದಲ್ಲಿ ಇಥಿಯೋಪಿಯಾ ಏರ್‍ ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ

ಸೌದಿ ಅರೇಬಿಯಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಥಿಯೋಪಿಯಾ ಏರ್ ಲೈನ್ಸ್ ನ ಸರಕು ವಿಮಾನ ತಾಂತ್ರಿಕ ದೋಷದಿಂದಾಗಿ ಮುಂಬೈನಲ್ಲೇ ತುರ್ತಾಗಿ ಇಳಿದಿರುವ ಘಟನೆ ವರದಿಯಾಗಿದೆ.

Published: 09th November 2020 01:09 AM  |   Last Updated: 09th November 2020 12:42 PM   |  A+A-


Ethiopian cargo aircraft

ಇಥಿಯೋಪಿಯಾ ಏರ್ ಲೈನ್ಸ್

Posted By : Vishwanath S
Source : UNI

ಮುಂಬೈ: ಸೌದಿ ಅರೇಬಿಯಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಥಿಯೋಪಿಯಾ ಏರ್ ಲೈನ್ಸ್ ನ ಸರಕು ವಿಮಾನ ತಾಂತ್ರಿಕ ದೋಷದಿಂದಾಗಿ ಮುಂಬೈನಲ್ಲೇ ತುರ್ತಾಗಿ ಇಳಿದಿರುವ ಘಟನೆ ವರದಿಯಾಗಿದೆ. 

ಸರಕು ವಿಮಾನ  ಇಟಿ -690ದಲ್ಲಿ  ಹೈಡ್ರಾಲಿಕ್ ಸೋರಿಕೆ ಹಿನ್ನೆಲೆಯಲ್ಲಿ ಮುಂಬೈಗೆ ಮಾರ್ಗ ಬದಲಿಸಲಾಯಿತು. ಇದರಿಂದ ವಿಮಾನ ಸುರಕ್ಷಿತವಾಗಿ ಇಳಿಯಲು ಸಾಧ್ಯವಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ವಿಮಾನದಲ್ಲಿ ಎಂಟು ಸಿಬ್ಬಂದಿ ಇದ್ದರು. ಮುಂಬೈ ವಿಮಾನ ನಿಲ್ದಾಣ  ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.  ವಿಮಾನ ನಿಲ್ದಾಣ ಮತ್ತು ವೈದ್ಯಕೀಯ ತಂಡಗಳೊಂದಿಗೆ ಮುಂಬೈ ಅಗ್ನಿಶಾಮಕ ದಳದ ಆಂಬುಲೆನ್ಸ್‌ಗಳು ವಿಮಾನದ ಸುತ್ತ ನೆರೆದಿದ್ದವು.

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp