ಬಿಹಾರ ಚುನಾವಣಾ ಫಲಿತಾಂಶ: ಮಹಾಘಟ ಬಂಧನ್ ವಿರುದ್ಧ ಕಡಿಮೆ ಅಂತರದ ಲೀಡ್; ನಿತೀಶ್ ಜೊತೆಗೆ ಶಾ ಮಾತುಕತೆ

ಬಿಹಾರ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ಇನ್ನೂ ಮುಂದುವರೆದಿದ್ದು, ಮಹಾ ಘಟ ಬಂಧನ್ ವಿರುದ್ಧ ಎನ್ ಡಿಎ ಕಡಿಮೆ ಅಂತರದ ಲೀಡ್ ಹೊಂದಿದೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ,ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನಿತೀಶ್ ಕುಮಾರ್, ಅಮಿತ್ ಶಾ
ನಿತೀಶ್ ಕುಮಾರ್, ಅಮಿತ್ ಶಾ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ಇನ್ನೂ ಮುಂದುವರೆದಿದ್ದು, ಮಹಾ ಘಟ ಬಂಧನ್ ವಿರುದ್ಧ ಎನ್ ಡಿಎ ಕಡಿಮೆ ಅಂತರದ ಲೀಡ್ ಹೊಂದಿದೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ,ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸಂಜೆ ವೇಳೆಗೆ ಎನ್ ಡಿಎ 124 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಆರ್ ಜೆಡಿ ನೇತೃತ್ವದ ಮಹಾಘಟ ಬಂಧನ್  111 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಎಐಎಂಐಎಂ 5, ಬಿಎಸ್ ಪಿ ಹಾಗೂ ಇತರರು 8 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಆರ್ ಜೆಡಿ 73, ಬಿಜೆಪಿ 67 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿವೆ. 

ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಎನ್ ಡಿಎ ಎದುರು ನೋಡುತ್ತಿದೆ. ಬಿಹಾರದಲ್ಲಿ ಜೆಡಿಯು ಎನ್ ಡಿಎ ಮೈತ್ರಿಕೂಟದ ಅಂಗಪಕ್ಷವಾಗಿದ್ದು, ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿ  ಮಾಡುವುದಾಗಿ ಈಗಾಗಲೇ ಕೇಂದ್ರದ ನಾಯಕರು ಅಭಯ ನೀಡಿದ್ದಾರೆ. ಈ ನಡುವೆ ಅಮಿತ್ ಶಾ, ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ..

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಜೆಡಿ ಮುಖಂಡ ಮನೋಜ್ ಜಾ, ಬಿಹಾರವು ತನ್ನದೇ ಆದ ಸರ್ಕಾರವನ್ನು ಪಡೆಯಲಿದೆ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಖ್ಯಮಂತ್ರಿ ನಿರ್ಗಮಿಸುವುದು ಖಚಿತವಾಗಿದೆ. ಆದ್ದರಿಂದ ಮತ ಎಣಿಕೆ ನಿಧಾನ ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com