ಉಪ ಚುನಾವಣೆ 2020: ಗೆಲುವಿನ ಖಾತೆ ತೆರೆದ ಬಿಜೆಪಿ, ಮಣಿಪುರದ ಸಿಂಗಾಟ್‌ ನಲ್ಲಿ ಜಯ

ಉಪ ಚುನಾವಣೆ 2020ರಲ್ಲಿ ಭಾರತೀಯ ಜನತಾ ಪಾರ್ಟಿ ತನ್ನ ಮೊದಲ ಗೆಲುವಿನ ಖಾತೆ ತೆರೆದಿದ್ದು, ಮಣಿಪುರದ ಸಿಂಗಾಟ್‌ ನಲ್ಲಿ ಬಿಜೆಪಿ ಅಭ್ಯರ್ಥಿ ಜಯ ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಉಪ ಚುನಾವಣೆ 2020ರಲ್ಲಿ ಭಾರತೀಯ ಜನತಾ ಪಾರ್ಟಿ ತನ್ನ ಮೊದಲ ಗೆಲುವಿನ ಖಾತೆ ತೆರೆದಿದ್ದು, ಮಣಿಪುರದ ಸಿಂಗಾಟ್‌ ನಲ್ಲಿ ಬಿಜೆಪಿ ಅಭ್ಯರ್ಥಿ ಜಯ ದಾಖಲಿಸಿದ್ದಾರೆ.

ಇಂದು ಬಿಹಾರ ವಿಧಾನಸಭೆ ಚುನಾವಣೆ ಜೊತೆಗೇ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತೆರವಾಗಿದ್ದ ವಿವಿಧ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆಯೂ ಇಂದು ನಡೆಯುತ್ತಿದೆ. ಈ ಉಪ ಚುನಾವಣೆಯಲ್ಲಿ ಮಣಿಪುರದ ಸಿಂಗಾಟ್‌‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಮೊದಲ ಜಯ  ಲಭ್ಯವಾಗಿರುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಮಣಿಪುರದ ಐದು ಉಪ ಚುನಾವಣಾ ಕ್ಷೇತ್ರಗಳ ಪೈಕಿ ಸಿಂಗಾಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿನ್ಸುವಾನ್ಹೌ ಜಯಗಳಿಸಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಜೆಪಿ ಅಭ್ಯರ್ಥಿ ಗಿನ್ಸುವಾನ್ಹೌ ಅವರನ್ನು ಸಿಂಗಾಟ್‌ನಿಂದ ವಿಜೇತರೆಂದು ಘೋಷಿಸಲಾಗಿದ್ದು, ವಾಂಗೋಯಿ ಕ್ಷೇತ್ರದಲ್ಲಿ ಓನಮ್ ಲುಖೋಯ್ ಸಿಂಗ್ ಅವರು 268 ಮತಗಳ ಅಂತರದಿಂದ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಭ್ಯರ್ಥಿ ಖುರೈಜಮ್  ಲೋಕನ್ ಸಿಂಗ್ ವಿರುದ್ಧ ಜಯಗಳಿಸಿದ್ದಾರೆ ಎಂದು ತಿಳಿದುಬಂದಿದೆ.

ಅಂತೆಯೇ ಕಾಂಗ್ರೆಸ್‌ನ ಮೊಯಿರಾಂಗ್ಥೆಮ್ ಹೇಮಂತ ಸಿಂಗ್ ಅವರು ವಾಂಗ್‌ಜಿಂಗ್ ಟೆಂಥಾ ಕ್ಷೇತ್ರದಲ್ಲಿ ಬಿಜೆಪಿಯ ಪಾವೊಮ್ ಬ್ರೋಜೆನ್ ಸಿಂಗ್ ವಿರುದ್ಧ 675 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ನವೆಂಬರ್ 7 ರಂದು ರಾಜ್ಯದ ಲಿಲಾಂಗ್, ವಾಂಗ್‌ಜಿಂಗ್ ಟೆಂಥಾ ಮತ್ತು ಸೈತು ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com