ಉತ್ತರ ಪ್ರದೇಶ ಉಪ ಚುನಾವಣೆ: 7 ಸ್ಥಾನಗಳ ಪೈಕಿ 6 ಬಿಜೆಪಿ ಪಾಲು, ಒಂದು ಸ್ಥಾನ ಸಮಾಜವಾದಿ ಪಕ್ಷಕ್ಕೆ!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ತೀರ್ಪಾಗಿ ನಡೆದ ಏಳು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆರು ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದ್ದು, ಒಂದು ಸ್ಥಾನ ಮಾತ್ರ ಸಮಾಜವಾದಿ ಪಕ್ಷದ ಪಾಲಾಗಿದೆ. ಕಣದಲ್ಲಿದ್ದ ಬಿಎಸ್ ಪಿ ಮತ್ತು ಕಾಂಗ್ರೆಸ್ ಗೆ ಒಂದು ಸ್ಥಾನ ಕೂಡ ಬಂದಿಲ್ಲ.
ಸಿಎಂ ಯೋಗಿ ಆದಿತ್ಯನಾಥ್
ಸಿಎಂ ಯೋಗಿ ಆದಿತ್ಯನಾಥ್

ಲಕ್ನೊ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ತೀರ್ಪಾಗಿ ನಡೆದ ಏಳು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆರು ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದ್ದು, ಒಂದು ಸ್ಥಾನ ಮಾತ್ರ ಸಮಾಜವಾದಿ ಪಕ್ಷದ ಪಾಲಾಗಿದೆ. ಕಣದಲ್ಲಿದ್ದ ಬಿಎಸ್ ಪಿ ಮತ್ತು ಕಾಂಗ್ರೆಸ್ ಗೆ ಒಂದು ಸ್ಥಾನ ಕೂಡ ಬಂದಿಲ್ಲ.

ಕೊರೋನಾ ಸಾಂಕ್ರಾಮಿಕದ ನಡುವೆ ಬಿಹಾರ ವಿಧಾನಸಭೆಯ ಎರಡನೇ ಹಂತದ ಮತದಾನದ ದಿನವೇ ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಅವುಗಳಲ್ಲಿ ಆರು ಕ್ಷೇತ್ರಗಳಾದ ಅಮ್ರೊಹಾದಲ್ಲಿ ನೌಗೌನ್ ಸಡಟ್, ಫಿರೋಜಾಬಾದ್ ನಲ್ಲಿ ಬುಲಂಡ್ ಶಹ್ರ್, ಟುಂಡ್ಲಾ, ಕಾನ್ಪುರ ಡೆಹಟ್ ನಲ್ಲಿ ಘಟಂಪುರ್, ಉನ್ನಾವೊದಲ್ಲಿ ಬಂಗರ್ಮೌ ಮತ್ತು ಡಿಯೊರಿಯಾ ಸಡರ್ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಜೌನ್ಪುರದ ಮಲ್ಹಾನಿ ಕ್ಷೇತ್ರ ಸಮಾಜವಾದಿ ಪಕ್ಷದ ಪಾಲಾಗಿದೆ. 

ಬಿಜೆಪಿ ಗೆಲುವನ್ನು ಪಕ್ಷದ ಸಂಘಟನಾತ್ಮಕ ಕೆಲಸ, ಬಿಜೆಪಿ ಕೆಡೇರ್ ಗಳ ನಿಷ್ಠಾವಂತ ಕೆಲಸ, ಉತ್ತಮ ನಾಯಕತ್ವ, ಪ್ರಧಾನಿ ಮೋದಿಯವರ ಆಡಳಿತ ಮತ್ತು ವರ್ಚಸ್ಸೇ ಕಾರಣ ಎಂದು ಸಿಎಂ ಯೋಗಿ ಆದಿತ್ಯನಾಥ್ ವಿಶ್ಲೇಷಿಸಿದ್ದು, ಮೋದಿಯವರಿದ್ದರೆ ಎಲ್ಲವೂ ಸಾಧ್ಯ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾರವರ ನಾಯಕತ್ವದಡಿಯಲ್ಲಿ ಬಿಜೆಪಿಯ ಅಭೂತಪೂರ್ವ ಸಾಧನೆಗೆ ನಾನು ಅಭಿನಂದಿಸುತ್ತೇನೆ. ಭಾರತವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರು ತೆಗೆದುಕೊಂಡು ಹೋಗುವ ರೀತಿ, ಮಹಿಳೆಯರು, ರೈತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರ ಏಳಿಗೆಗಾಗಿ ಶ್ರಮಿಸುವ ರೀತಿಯನ್ನು ಜನರು ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ತೋರಿಸಿಕೊಡುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ತಮ್ಮ ಹರ್ಷವನ್ನು ತೋರಿಸಿಕೊಂಡಿದ್ದಾರೆ. 

ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು, ಕೋವಿಡ್-19 ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ವಿರೋಧ ಪಕ್ಷಗಳು ಹಬ್ಬಿಸುತ್ತಿರುವ ಸುಳ್ಳು ವದಂತಿಗಳನ್ನು ಜನರು ನಂಬಬಾರದು ಎಂದು ಕೂಡ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. 

ಛತ್ತೀಸ್ ಗಢದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಯ: ಛತ್ತೀಸ್ ಗಢದ ಮರ್ವಾಹಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com