ಮಾತೃಭೂಮಿ ರಕ್ಷಣೆ, ದೇಶದ ಸೇವೆ ಎಂದಿಗೂ ನಮ್ಮ ಗೌರವ: ಮೋದಿ ದೀಪಾವಳಿ ಶುಭಾಶಯಕ್ಕೆ ಬಿಎಸ್ಎಫ್ ಪ್ರತಿಕ್ರಿಯೆ

ಮಾತೃಭೂಮಿ ರಕ್ಷಣೆ ಮಾಡುವುದು ಹಾಗೂ ದೇಶಕ್ಕಾಗಿ ಸೇವೆ ಮಾಡುತ್ತಿರುವುದು ನಮ್ಮ ಗೌರವ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೀಪಾವಳಿ ಶುಭಾಶಯಕ್ಕೆ ಗಡಿ ಭದ್ರತಾ ಪಡೆ ಪ್ರತಿಕ್ರಿಯೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾತೃಭೂಮಿ ರಕ್ಷಣೆ ಮಾಡುವುದು ಹಾಗೂ ದೇಶಕ್ಕಾಗಿ ಸೇವೆ ಮಾಡುತ್ತಿರುವುದು ನಮ್ಮ ಗೌರವ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೀಪಾವಳಿ ಶುಭಾಶಯಕ್ಕೆ ಗಡಿ ಭದ್ರತಾ ಪಡೆ ಪ್ರತಿಕ್ರಿಯೆ ನೀಡಿದೆ. 

ಮಾತೃಭೂಮಿ ರಕ್ಷಣೆ ಮಾಡುವುದು, ಸೇವೆ ಸಲ್ಲಿರುವುದು ನಮ್ಮ ಗೌರವವಾಗಿದೆ. ದೇಶದ ಗಡಿ ಸಮಗ್ರತೆಯನ್ನು ಎತ್ತಿಹಿಡಿಯುವಲ್ಲಿ ನಮ್ಮ ಜೀವ ಅಪಾಯಕ್ಕೆ ಸಿಲುಕಿದರೂ ಸರಿ ನಾವು ಸದಾಕಾಲ ಸಿದ್ಧರಿರುತ್ತೇವೆ. ನಮ್ಮ ವೀರ ಯೋಧರ ಕುಟುಂಬಕ್ಕೆ ಸೆಲ್ಯೂಟ್ ಹೊಡೆಯುತ್ತೇವೆ. ಜೈ ಹಿಂದ್ ಎಂದು ಬಿಎಸ್ಎಫ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದೆ. 

ದೀಪಾವಳಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿಯವರು, ದೀಪಾವಳಿಯ ಹಬ್ಬದಂದು ನಮ್ಮ ಯೋಧರಿಗಾಗಿ ದೀಪವನ್ನು ಬೆಳಗಿಸೋಣ. ದೇಶವನ್ನು ನಿರ್ಭಯದಿಂದ ಕಾಯುತ್ತಿರುವ ನಮ್ಮ ವೀರ ಯೋಧರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಗಡಿ ಕಾಯುತ್ತಿರುವ ಯೋಧರ ಕುಟುಂಬಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದರು. 

ಇಂದೂ ಕೂಡ ರಾಜಸ್ಥಾನದ ಜೈಸಾಲ್ಮೇರ್'ನ ಲೋಂಗೆವಾಲಗೆ ತೆರಳಿರುವ ಮೋದಿಯವರು, ಭಾರತೀಯ ಸೇನಾಪಡೆಯ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ.
 
ಈ ವೇಳೆ ಯೋಧರೊಂದಿಗೆ ಮಾತನಾಡಿರುವ ಮೋದಿಯವರು, ಸೇನಾಪಡೆಯ ಸಾಧನೆ, ತ್ಯಾಗ ಹಾಗೂ ಬಲಿದಾನವನ್ನು ಕೊಂಡಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com