ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಆರೋಪಿಗಳಿಗೆ ನೀಡುವ ಶಿಕ್ಷೆ ನೋಡಿ ಇತರರು ಭಯಪಡಬೇಕು: ನಿವೃತ್ತ ಸೇನಾಧಿಕಾರಿಗಳ ಮನವಿ

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ತನಿಖೆಯನ್ನು ಶೀಘ್ರಗೊಳಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ದೇಶದ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವವರಿಗೆ ತಕ್ಕ ಪಾಠ ಕಲಿಸಬೇಕು. ನೀಡುವ ಶಿಕ್ಷೆ ನೋಡಿ ಇತರರು ಭಯಪಡಬೇಕು ಎಂದು ನಿವೃತ್ತ  ಸೇನಾಧಿಕಾರಿಗಳು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ತನಿಖೆಯನ್ನು ಶೀಘ್ರಗೊಳಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ದೇಶದ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವವರಿಗೆ ತಕ್ಕ ಪಾಠ ಕಲಿಸಬೇಕು. ನೀಡುವ ಶಿಕ್ಷೆ ನೋಡಿ ಇತರರು ಭಯಪಡಬೇಕು ಎಂದು ನಿವೃತ್ತ  ಸೇನಾಧಿಕಾರಿಗಳು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ರಕ್ಷಣಾ ವಲಯದಲ್ಲಿನ ಭ್ರಷ್ಟಾಚಾರವು ರಾಷ್ಟ್ರದ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯುಂಟುಮಾಡುತ್ತದೆ ಎಂದು ಭಾರತೀಯ ಸಶಸ್ತ್ರ ಪಡೆಗಳ ಪರಿಣತರ ತಂಡವು ಅಭಿಪ್ರಾಯಪಟ್ಟಿದ್ದು, ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹಗರಣಗಳ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ  ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಶಿಕ್ಷೆ ಇತರರಿಗೆ ಮಾದರಿಯಾಗಬೇಕು. ಏಕೆಂದರೆ ರಕ್ಷಣಾ ವಲಯದಲ್ಲಿನ ಭ್ರಷ್ಟಾಚಾರವನ್ನು ಕೇವಲ ಹಗರಣವನ್ನಾಗಿ ಅಲ್ಲದೆ ರಾಷ್ಟ್ರದ್ರೋಹಿ ಪ್ರಕರಣವಾಗಿ ಪರಿಗಣಿಸಬೇಕಾಗುತ್ತದೆ. ಭಯೋತ್ಪಾದನೆಗೆ ಸಮನಾಗಿ ಇದನ್ನು ಪರಿಗಣಿಸಿ  ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.  

ಈ ಕುರಿತಂತೆ ಏರ್ ಮಾರ್ಷಲ್ ಎಸ್ ಪಿ ಸಿಂಗ್ (ನಿವೃತ್ತ), ಏರ್ ಮಾರ್ಷಲ್ ದುಶ್ಯಂತ್ ಸಿಂಗ್ (ನಿವೃತ್ತ), ವೈಸ್ ಅಡ್ಮಿರಲ್ ಶೇಖರ್ ಸಿನ್ಹಾ (ನಿವೃತ್ತ), ಲೆಫ್ಟಿನೆಂಟ್ ಜನರಲ್ ವಿ ಕೆ ಚತುರ್ವೇದಿ (ನಿವೃತ್ತ) ಮತ್ತು ಲೆಫ್ಟಿನೆಂಟ್ ಜನರಲ್ ಅರವಿಂದ ಶರ್ಮಾ (ನಿವೃತ್ತ) ಅವರ ನೇತೃತ್ವದ 78  ಮಂದಿಯ ತಂಡ ಸಹಿ ಸಂಗ್ರಹ ಕೂಡ ಮಾಡಿದ್ದು, ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣ ಭವಿಷ್ಯದಲ್ಲಿ ರಕ್ಷಣಾ ಇಲಾಖೆಯಲ್ಲಿ ಅವ್ಯವಹಾರಕ್ಕೆ ಕೈಹಾಕುವವರಿಗೆ ನಿದರ್ಶನವಾಗಬೇಕು ಎಂದು ಹೇಳಿದ್ದಾರೆ. 

ರಾಷ್ಟ್ರೀಯ ಭದ್ರತೆಯು ಅತ್ಯುನ್ನತವಾದುದು ಮತ್ತು ಅದರ ಪಾವಿತ್ರ್ಯತೆಯೊಂದಿಗೆ ಆಟವಾಡಲು ಪ್ರಯತ್ನಿಸುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಸಂದೇಶವನ್ನು ಉನ್ನತ ಸ್ಥಾನದಲ್ಲಿರುವರಿಗೆ ಮತ್ತು ಪ್ರಬಲರಿಗೆ ಕಳುಹಿಸಬೇಕಾಗಿದೆ. ಅಂತಹ ಸಂದರ್ಭಗಳಲ್ಲಿ ಕ್ರಮಗಳ ಕೊರತೆಯು  ಭ್ರಷ್ಟರಿಗೆ ಅಂತಹ ವಿರೋಧಿಗಳೊಂದಿಗೆ ತಮ್ಮ ಅಕ್ರಮದಲ್ಲಿ ಮುಂದುವರಿಯಲು ರೆಕ್ಕೆಗಳನ್ನು ನೀಡಿದಂತಾಗುತ್ತದೆ. ಅಂತೆಯೇ ಕೇವಲ ಮಧ್ಯವರ್ತಿಯಲ್ಲದೆ, ಸರ್ಕಾರದಲ್ಲಿ ಲಂಚ ಪಡೆದ ಎಲ್ಲ ರಾಜಕಾರಣಿಗಳೂ ಮತ್ತು ಅವರ ಸಂಬಂಧಿಕರೂ ಭ್ರಷ್ಟಾಚಾರದಿಂದ ನೇರವಾಗಿ ಲಾಭ  ಪಡೆದಿದ್ದಾರೆ ಅಥವಾ ಯಾವುದೇ ಕಾರಣಕ್ಕೂ ಅನೈತಿಕ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಇನ್ನು ಹೇಳಿಕೆಯಲ್ಲಿ ರಕ್ಷಣಾ ಖರೀದಿಯ ವಿಷಯದಲ್ಲಿ ಭ್ರಷ್ಟಾಚಾರವು ಭಾರತದ ರಕ್ಷಣಾ ಸನ್ನದ್ಧತೆಯ ಮೇಲೆ ದುರ್ಬಲಗೊಳಿಸುವ ಪರಿಣಾಮವನ್ನು ಬೀರುತ್ತದೆ, ಇದು ಬೋಫೋರ್ಸ್ ಹಗರಣವನ್ನು ಒಂದು ಉದಾಹರಣೆಯೆಂದು ಉಲ್ಲೇಖಿಸಿದ್ದು, ಸ್ವೀಡಿಷ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ  ಸೇರಿಸಲಾಗಿದ್ದರೂ, ಭಾರತವು ಅತ್ಯುತ್ತಮ ಫಿರಂಗಿ ಗನ್‌ ನ ಮತ್ತಷ್ಟು ಪೂರೈಕೆ ಮತ್ತು ಸ್ಥಳೀಯ ಅಭಿವೃದ್ಧಿಯನ್ನು ಕಳೆದುಕೊಂಡಿತು, ಇದು ಸೈನ್ಯದ ಸಾಮರ್ಥ್ಯ ಮತ್ತು ಆಧುನೀಕರಣದ ಪ್ರಯತ್ನಕ್ಕೆ ಗಂಭೀರ ಪರಿಣಾಮ ಬೀರಿತು ಎಂದು ಉಲ್ಲೇಖಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com