ಓವೈಸಿಗೆ ಹಾಕುವ ಒಂದೊಂದು ಮತವೂ ಭಾರತದ ವಿರುದ್ಧವಾಗುತ್ತದೆ: ತೇಜಸ್ವಿ ಸೂರ್ಯ 

ಪಶ್ಚಿಮ ಬಂಗಾಳದ ನಂತರ ಹೈದರಾಬಾದ್ ಗೆ ಭೇಟಿ ನೀಡಿರುವ ಬಿಜೆಪಿ ಯುವ ಮೋರ್ಚಾ ರಾಷ್ಟ್ರಾಧ್ಯಕ್ಷ ತೇಜಸ್ವಿ ಸೂರ್ಯ ಅಸಾದುದ್ದೀನ್ ಓವೈಸಿ ವಿರುದ್ಧ ಗುಡುಗಿದ್ದಾರೆ.  

Published: 23rd November 2020 11:46 PM  |   Last Updated: 23rd November 2020 11:46 PM   |  A+A-


MP Tejasvi Surya

ಸಂಸದ ತೇಜಸ್ವಿ ಸೂರ್ಯ

Posted By : Srinivas Rao BV
Source : Online Desk

ಹೈದರಾಬಾದ್: ಪಶ್ಚಿಮ ಬಂಗಾಳದ ನಂತರ ಹೈದರಾಬಾದ್ ಗೆ ಭೇಟಿ ನೀಡಿರುವ ಬಿಜೆಪಿ ಯುವ ಮೋರ್ಚಾ ರಾಷ್ಟ್ರಾಧ್ಯಕ್ಷ ತೇಜಸ್ವಿ ಸೂರ್ಯ ಅಸಾದುದ್ದೀನ್ ಓವೈಸಿ ವಿರುದ್ಧ ಗುಡುಗಿದ್ದಾರೆ.  

ಹೈದರಾಬಾದ್ ನ ಸ್ಥಳೀಯ ಸಂಸ್ಥೆ ಚುನಾವಣೆಗೆ ಪ್ರಚಾರದ ಭಾಗವಾಗಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ತೇಜಸ್ವಿ ಸೂರ್ಯ,  ಓವೈಸಿಯನ್ನು ಮೊಹಮ್ಮದ್ ಅಲಿ ಜಿನ್ನಾ ಅವತಾರವೆಂದು ಹೇಳಿದ್ದು, ಓವೈಸಿಗೆ ಹಾಕುವ ಒಂದೊಂದು ಮತವೂ ಭಾರತದ ವಿರುದ್ಧವಾಗುತ್ತದೆ ಎಂದು ಮತದಾರರನ್ನು ಎಚ್ಚರಿಸಿದ್ದಾರೆ. 

"ಓವೈಸಿ ಸಹೋದರರ ವಿರುದ್ಧ ವಿಭಜಕ ಮತ್ತು ಕೋಮು ರಾಜಕಾರಣ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಅವಕಾಶ ನೀಡದೇ ರೋಹಿಂಗ್ಯ ಮುಸ್ಲಿರು ಒಳನುಗ್ಗುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ" ಎಂದು ತೇಜಸ್ವಿ ಆರೋಪಿಸಿದ್ದಾರೆ.

ಓವೈಸಿಗಳಿಗೆ ಇಲ್ಲಿ ನೀವು ಮತ ನೀಡಿದರೆ ಅವರು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಕರ್ನಾಟಕಗಳಲ್ಲೂ ಬಲಿಷ್ಠರಾಗುತ್ತಾರೆ. ಓವೈಸಿ ಯಾರು? ಓವೈಸಿ ಜಿನ್ನಾನ ಹೊಸ ಅವತಾರ ಆತನನ್ನು ನಾವು ಮಣಿಸಬೇಕು, ಬಿಜೆಪಿಗೆ ನೀಡುವ ಪ್ರತಿಯೊಂದು ಮತವೂ ಭಾರತ, ಹಿಂದುತ್ವದ ಪರವಾಗಿರುತ್ತದೆ, ದೇಶವನ್ನು ಬಲಿಷ್ಠಗೊಳಿಸುತ್ತದೆ ಎಂದು ತೇಜಸ್ವಿ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp