ವಿವಿಧ ರಾಜ್ಯಗಳಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿದಂತೆ ದೇಶದಲ್ಲಿ ಕೋವಿಡ್ ಎರಡನೇ ಅಲೆ ಶುರು? ತಜ್ಞರು ಏನಾಂತರೆ?

ನವೆಂಬರ್ 16 ರಂದು ತಿಂಗಳಿನಲ್ಲಿ ನಾಲ್ಕು ತಿಂಗಳುಗಳಲ್ಲೇ ಅತಿ ಕಡಿಮೆ ಎನ್ನಲಾದ ಕೇವಲ 28,609 ಹೊಸ ಕೊರೋನಾ ಪ್ರಕರಣ ಕಾಣಿಸಿಕೊಂಡಿದ್ದರೂ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಪ್ರತಿದಿನ 38 ಸಾವಿರದಿಂದ 46 ಸಾವಿರ ಹೊಸ ಪ್ರಕರಣ ಕಂಡುಬರುತ್ತಿದ್ದು, ದೇಶದಲ್ಲಿ ಮಾರಕ ಸೋಂಕಿನ ಎರಡನೇ ಹಂತದ ಆರಂಭದ ಬಗ್ಗೆ ಕಳವಳ ಮೂಡಿಸಿದೆ.
ತಪಾಸಣೆ ಮಾಡುತ್ತಿರುವ ಸ್ವಯಂ ಸೇವಕರು
ತಪಾಸಣೆ ಮಾಡುತ್ತಿರುವ ಸ್ವಯಂ ಸೇವಕರು

ನವದೆಹಲಿ: ನವೆಂಬರ್ 16 ರಂದು ತಿಂಗಳಿನಲ್ಲಿ ನಾಲ್ಕು ತಿಂಗಳುಗಳಲ್ಲೇ ಅತಿ ಕಡಿಮೆ ಎನ್ನಲಾದ ಕೇವಲ 28,609 ಹೊಸ ಕೊರೋನಾ ಪ್ರಕರಣ ಕಾಣಿಸಿಕೊಂಡಿದ್ದರೂ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಪ್ರತಿದಿನ 38 ಸಾವಿರದಿಂದ 46 ಸಾವಿರ ಹೊಸ ಪ್ರಕರಣ ಕಂಡುಬರುತ್ತಿದ್ದು, ದೇಶದಲ್ಲಿ ಮಾರಕ ಸೋಂಕಿನ ಎರಡನೇ ಹಂತದ ಆರಂಭದ ಬಗ್ಗೆ ಕಳವಳ ಮೂಡಿಸಿದೆ.

ಸೋಂಕಿನ ತೀವ್ರತೆಯಲ್ಲಿ ಕಡಿಮೆಯಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಗುಜರಾತ್, ಮಧ್ಯಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ, ಚಂಢೀಗಡ ಮತ್ತು ದೆಹಲಿಯಲ್ಲಿ ಪ್ರತಿದಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ನೋಡಬಹುದಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಎರಡನೇ ಅಲೆಯ ಸಂಕೇತಗಳನ್ನು ಮೊದಲಿಗೆ ನಾವು ನೋಡಬಹುದಾಗಿದೆ ಎಂದು ಆರೋಗ್ಯ ತಜ್ಞ ರಿಜಿ ಎಂ ಜಾನ್ ಹೇಳಿದ್ದಾರೆ. ಕೇರಳ, ಒಡಿಶಾ, ಬಿಹಾರ, ಅಸ್ಸಾಂ, ಜಾರ್ಖಂಡ್, ಗುಜರಾತ್ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮರಣ ಪ್ರಮಾಣ ಹೆಚ್ಚಳವಾಗುತ್ತಿರುವುದನ್ನು ಸಹ ನೋಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೊದಲ ಅಲೆಯಲ್ಲಿ ಸೋಂಕು ಹರಡದಂತೆ ಕ್ರಮ ಕೈಗೊಂಡಿದ್ದರೂ ಎರಡನೇ ಅಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ. ನವೆಂಬರ್ ಮಾಸಾಂತ್ಯ ಅಥವಾ ಡಿಸೆಂಬರ್ ಆರಂಭದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞ ಉಮ್ಮನ್ ಸಿ ಕುರಿಯನ್ ಎಚ್ಚರಿಕೆ ನೀಡಿದ್ದಾರೆ.

ಎರಡನೇ ಅಲೆ ಸುನಾಮಿ ರೀತಿಯಲ್ಲಿ ಇರುವ ಸಾಧ್ಯತೆಯಿದ್ದು, ಜನರು ಸೂಕ್ತ ಮುಂಜಾಗ್ರತೆ ವಹಿಸುವಂತೆ ಮಹಾರಾಷ್ಟ್ರ  ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರ ನೀಡುವ ಕೋವಿಡ್-19 ಮಾಹಿತಿ ಪ್ರಕಾರ, ಇದೀಗ ದೇಶದಲ್ಲಿ ಸೋಂಕಿನ ವೃದ್ಧಿ ದರ ಶೇ. 0.45 ರಷ್ಟಿದೆ. 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ವೇಗದ ರೀತಿಯಲ್ಲಿ ಸೋಂಕು ವೃದ್ದಿಯಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಶೇ, 2, ನಾಗಲ್ಯಾಂಡ್ ನಲ್ಲಿ ಶೇ. 1.3  ಮತ್ತು ದೆಹಲಿ, ಹರಿಯಾಣದಲ್ಲಿ ಶೇ. 1. 2 ರಂತೆ ಸೋಂಕು ವೇಗವಾಗಿ ವೃದ್ಧಿಯಾಗುತ್ತಿದೆ.

ಜಾಗತಿಕವಾಗಿ ಮತ್ತು ಭಾರತದಲ್ಲಿ, ಹೆಚ್ಚಿನ ಸಂಖ್ಯೆಯ ವಲಸಿಗರ ಜನರನ್ನು  ಮಹಾನಗರಗಳು ಮತ್ತು ನಗರಗಳು ತೀವ್ರವಾದ ಸೋಕು ಹರಡುವಿಕೆಯ  ತಾಣಗಳಾಗಿವೆ ಮತ್ತು ಮರಣವು ರಾಷ್ಟ್ರೀಯ ಸರಾಸರಿಗಿಂತ ಅನೇಕ ಪಟ್ಟು ಹೆಚ್ಚಾಗಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಅಮಿತಾಭ್ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com