ಭೂ ದಾಳಿ ಅವೃತ್ತಿಯ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಭಾರತದ ಅತ್ಯಂತ ಪ್ರಬಲ ಮತ್ತು ಯಶಸ್ವೀ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿರುವ ಬ್ರಹ್ಮೋಸ್ ಕ್ಷಿಪಣಿ ಭೂದಾಳಿ ಆವೃತ್ತಿಯ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
ಬ್ರಹ್ಮೊಸ್ ಕ್ಷಿಪಣಿ
ಬ್ರಹ್ಮೊಸ್ ಕ್ಷಿಪಣಿ

ನವದೆಹಲಿ: ಭಾರತದ ಅತ್ಯಂತ ಪ್ರಬಲ ಮತ್ತು ಯಶಸ್ವೀ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿರುವ ಬ್ರಹ್ಮೋಸ್ ಕ್ಷಿಪಣಿ ಭೂದಾಳಿ ಆವೃತ್ತಿಯ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಮಂಗಳವಾರ ಬೆಳಗ್ಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಕ್ರೂಸ್ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಭಾರತೀಯ ಸೇನೆ ಡಿಆರ್ ಡಿಒದ ಕ್ಷಿಪಣಿ ಉಡಾವಣಾ ವ್ಯವಸ್ಥೆಯ ಮೂಲಕ ಕ್ಷಿಪಣಿ ಪರೀಕ್ಷೆ ನಡೆಸಿತು. ನಿಗದಿತ ಗುರಿಯನ್ನು ನಿಖರವೇಗ ಮತ್ತು 400  ಕಿ.ಮೀಗೂ ಅಧಿಕ ದೂರವಿರುವ ಗುರಿಯನ್ನು ನಿಖರವಾಗಿ ತಲುಪುವ ಮೂಲಕ ಯಶಸ್ವಿಯಾಯಿತು. 

ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ತನ್ನ ವರ್ಗದಲ್ಲಿ ವಿಶ್ವದ ಅತಿ ವೇಗದ ಕಾರ್ಯಾಚರಣಾ ವ್ಯವಸ್ಥೆಯಾಗಿದ್ದು, ಡಿಆರ್‌ಡಿಒ ಕ್ಷಿಪಣಿ ವ್ಯವಸ್ಥೆಯ ವ್ಯಾಪ್ತಿಯನ್ನು 298 ಕಿ.ಮೀ.ನಿಂದ 450 ಕಿ.ಮೀ.ಗೆ ವಿಸ್ತರಿಸಿತ್ತು. ಕಳೆದ ಎರಡು ತಿಂಗಳಲ್ಲಿ, ಡಿಆರ್‌ಡಿಒ ಹೊಸ ಮತ್ತು ಅಸ್ತಿತ್ವದಲ್ಲಿರುವ  ಕ್ಷಿಪಣಿ ವ್ಯವಸ್ಥೆಗಳನ್ನು ಪರೀಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಬ್ರಹ್ಮೋಸ್ ನ ಅತ್ಯಾಧುನಿಕ ಕ್ಷಿಪಣಿಗಳು 800 ಕಿ.ಮೀ.ಗಿಂತ ಹೆಚ್ಚಿನ ದೂರದ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸಬಲ್ಲದು. 

ಕಳೆದ ತಿಂಗಳಷ್ಟೇ ಭಾರತೀಯ ನೌಕಾದಳ ತನ್ನ ಐಎನ್ಎಸ್ ಚೆನ್ನೈ ಯುದ್ಧನೌಕೆಯಲ್ಲಿ ಅಳವಡಿಸಲಾಗಿದ್ದ ಬ್ರಹ್ಮೋಸ್ ಕ್ಷಿಪಣಿಯನ್ನು ಪರೀಕ್ಷೆಗೊಳಪಡಿಸಿತ್ತು. ಸುಮಾರು 400 ಕಿ.ಮೀ ಗೂ ಅಧಿಕ ದೂರದ ಗುರಿಯನ್ನು ಈ ಕ್ಷಿಪಣಿ ಯಶಸ್ವಿಯಾಗಿ ಹೊಡೆದುರುಳಿಸಿತ್ತು. 

ಇನ್ನು ಬ್ರಹ್ಮೋಸ್ ಸರಣಿಯ ಕ್ಷಿಪಣಿಗಳ ಯಶಸ್ಸಿನ ಬೆನ್ನಲ್ಲೇ ಭಾರತ ಈ ಕ್ರೂಸ್ ಮಿಸೈಲ್ ಗಳನ್ನು ರಫ್ತು ಮಾಡಲು ಮಾರುಕಟ್ಟೆಯತ್ತ  ಗಮನ ಕೇಂದ್ರೀಕರಿಸಿದೆ. ಈಗಾಗಲೇ ಸಾಕಷ್ಟು ದೇಶಗಳು ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಉತ್ಸುಕತೆ ತೋರಿವೆ.  
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com