ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಕ್ಸ್ ಅಂಡ್ ಕಿಂಗ್ಸ್ ಪ್ರಮೋಟರ್ ಪೀಟರ್ ಕೇರ್ಕರ್ ಬಂಧನ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕರಾದ ಪೀಟರ್ ಕೇರ್ಕರ್ ನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕರಾದ ಪೀಟರ್ ಕೇರ್ಕರ್ ನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಕಳೆದ ತಿಂಗಳು ಇ.ಡಿ.ಯಿಂದ ಸಂಸ್ಥೆಯ ಮಾಜಿ ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಯೆಸ್ ಬ್ಯಾಂಕ್ ಗೆ ಸಾಲ ಪಾವತಿಸಬೇಕಿದ್ದ ಕಂಪೆನಿಗಳ ಪೈಕಿ ಕಾಕ್ಸ್ ಅಂಡ್ ಕಿಂಗ್ಸ್ ಕೂಡ ಒಂದಾಗಿದೆ.

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆ ನಡೆಸುವ ವೇಳೆ ಇ.ಡಿ.ಯಿಂದ ಕಾಕ್ಸ್ ಅಂಡ್ ಕಿಂಗ್ಸ್ ನ ಆಂತರಿಕ ಲೆಕ್ಕಾಧಿಕಾರಿ ನರೇಶ್ ಜೈನ್ ಹಾಗೂ ಸಿಎಫ್ ಒ ಅನಿಲ್ ಖಂಡೇವಾಲ್ ಎಂಬಿಬ್ಬರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ಅಡಿಯಲ್ಲಿ ಬಂಧಿಸಲಾಗಿತ್ತು.  

ಯೆಸ್ ಬ್ಯಾಂಕ್ ನಿಂದ ಕಾಕ್ಸ್ ಅಂಡ್ ಕಿಂಗ್ಸ್ ಗೆ ಮಂಜೂರು ಮಾಡಿದ್ದ 3642 ಕೋಟಿ ರುಪಾಯಿ ಸಾಲದಲ್ಲಿ ಅಕ್ರಮದ ಆರೋಪ ಪತ್ತೆ ಹಚ್ಚಲಾಗಿತ್ತು. ಆಗಿನಿಂದ ಕಂಪೆನಿಯ ಮೇಲೆ ಇ.ಡಿ. ಕಣ್ಣು ಬಿತ್ತು. ಈಗಲೂ ಕಾಕ್ಸ್ ಅಂಡ್ ಕಿಂಗ್ಸ್ ನಿಂದ ಯೆಸ್ ಬ್ಯಾಂಕ್ ಗೆ ಸಾಲ ಬಾಕಿ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com