ವಾರಾಣಸಿಗೆ ಇಂದು ಪ್ರಧಾನಿ ಮೋದಿ ಭೇಟಿ: ಹಲವು ಕಾರ್ಯಕ್ರಮಗಳಲ್ಲಿ ಭಾಗಿ

ದೇವ್ ದೀಪಾವಳಿ ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಕ್ಷೇತ್ರಕ್ಕೆ ಇಂದು ಭೇಟಿ ನೀಡುವ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ವಾರಣಾಸಿ ನಗರ ಅಲಂಕೃತಗೊಂಡಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ವಾರಣಾಸಿ: ದೇವ್ ದೀಪಾವಳಿ ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಕ್ಷೇತ್ರಕ್ಕೆ ಇಂದು ಭೇಟಿ ನೀಡುವ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ವಾರಣಾಸಿ ನಗರ ಅಲಂಕೃತಗೊಂಡಿದೆ.

ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಾರಣಾಸಿ ಭೇಟಿ ಸಂದರ್ಭ ಪ್ರಧಾನಿ ಹಾಂದಿಯಾ (ಪ್ರಯಾಗ್​ರಾಜ್) – ರಾಜ್​ತಲಾಬ್ (ವಾರಣಾಸಿ) ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು 6 ಲೇನ್​ಗೆ ವಿಸ್ತರಿಸುವ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ರೂ. 2447 ಕೋಟಿ ಅಂದಾಜು ವೆಚ್ಚದ ಈ ಕಾಮಗಾರಿ ಪೂರ್ಣಗೊಂಡ ನಂತರ, 73 ಕಿ.ಮೀ. ಅಂತರದದ ಪ್ರಯಾಗ್​ರಾಜ್ ಮತ್ತು ವಾರಣಾಸಿ ನಡುವಣ ಪ್ರಯಾಣದ ಅವಧಿ ಸುಮಾರು 1 ಗಂಟೆಯಷ್ಟು ಕಡಿಮೆಯಾಗಲಿದೆ ಎಂದು ಪ್ರಧಾನಿ ಕಚೇರಿ ಹೇಳಿಕೆ ತಿಳಿಸಿದೆ.

ಇಂದು ಕಾರ್ತೀಕ ಮಾಸದ ಹುಣ್ಣಿಮೆಯ ಪ್ರಯುಕ್ತ ವಾರಣಾಸಿಯಲ್ಲಿ ಸಂಪ್ರದಾಯದಂತೆ ದೇವ ದೀಪಾವಳಿ ಉತ್ಸವ ನಡೆಯಲಿದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಧಾನಿ, ರಾಜ್​ಘಾಟ್​ನಲ್ಲಿ ಹಣತೆಯೊಂದನ್ನು ಹಚ್ಚಲಿದ್ದಾರೆ. ನಂತರ ಗಂಗೆಯ ಎರಡೂ ತಟಗಳಲ್ಲಿ 11 ಲಕ್ಷ ಹಣತೆಗಳನ್ನು ಬೆಳಗಲಾಗುತ್ತದೆ.

ಪ್ರವಾಸದ ವೇಳೆ ಕಾಶಿ ವಿಶ್ವನಾಥ ದೇಗುಲ ಪಥ ಕಾಮಗಾರಿಯ ಸ್ಥಳಪರಿಶೀಲಿಸಲಿದ್ದಾರೆ. ಪುರಾತನ ಸ್ಮಾರಕ ಸಾರನಾಥದಲ್ಲಿ ನಡೆಯಲಿರುವ ಧ್ವನಿ-ಬೆಳಕು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ದೇವ್ ದೀಪಾವಳಿ ಹಬ್ಬದಂದು ಪ್ರಧಾನಿ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಒಂಬತ್ತು ತಿಂಗಳ ನಂತರ ಅವರು ವಾರಾಣಸಿಗೆ ಭೇಟಿ ನೀಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com