ಭಯಾನಕ ವಿಡಿಯೋ: ಗೂಳಿ ಗುದಿದ್ದ ರಭಸಕ್ಕೆ ಕೂದಲೆಳೆ ಅಂತರದಿಂದ ಪಾರಾದ ಅಜ್ಜಿ, ಮೊಮ್ಮಗ!

ರಸ್ತೆಯಲ್ಲಿ ನಡೆದು ಬರುತ್ತಿದ್ದ ವೃದ್ಧ ಮಹಿಳೆ ಮೇಲೆ ಗೂಳಿಯೊಂದು ಗುದಿದ್ದೆ. ಇದರಿಂದಾಗಿ ಮನೆಯೊಂದರ ಗೇಟಿನ ಮುಂಭಾಗ ಆ ಮಹಿಳೆ ಬಿದ್ದಿದ್ದಾರೆ.

Published: 01st October 2020 11:01 AM  |   Last Updated: 01st October 2020 12:38 PM   |  A+A-


Bull_Women_photo1

ಗೂಳಿ, ಅಜ್ಜಿ, ಮೊಮ್ಮಗನ ಚಿತ್ರ

Posted By : Nagaraja AB
Source : Online Desk

ಹರಿಯಾಣ: ರಸ್ತೆಯಲ್ಲಿ ನಡೆದು ಬರುತ್ತಿದ್ದ ವೃದ್ಧ ಮಹಿಳೆ ಮೇಲೆ ಗೂಳಿಯೊಂದು ಗುದಿದ್ದೆ. ಇದರಿಂದಾಗಿ ಮನೆಯೊಂದರ ಗೇಟಿನ ಮುಂಭಾಗ ಆ ಮಹಿಳೆ ಬಿದ್ದಿದ್ದಾರೆ. ಇದನ್ನು ನೋಡಿದ ಮೊಮ್ಮಗ ತನ್ನ ಅಜ್ಜಿಯನ್ನು ರಕ್ಷಿಸಲು ಓಡೋಡಿ ಬರುವಾಗ ಆತನಿಗೂ ಗುದ್ದಿರುವ ಗೂಳಿ, ತನ್ನ ಕಾಲಿನಲ್ಲಿ ಮನಬಂದಂತೆ ತುಳಿದಿದೆ.

ನಂತರ, ಮನೆಯ ಗೇಟ್ ಮುಂಭಾಗ ಬಿದ್ದಿದ್ದ ಅಜ್ಜಿಯನ್ನು ಮೇಲಕ್ಕೆ ಎತ್ತು ಕರೆದೊಯ್ಯುತ್ತಿದ್ದ ಮೊಮ್ಮಗ ನ ಮೇಲೆ ಮತ್ತೆ ಗೂಳಿ ಎರಗಿದೆ.ಇದರಿಂದಾಗಿ ಇಬ್ಬರು ಕೆಳಗೆ ಬಿದ್ದಿದ್ದಾರೆ. ಗೂಳಿಯ ಹುಚ್ಚಾಟವನ್ನು ನೋಡಿದ ನೆರೆಹೊರೆಯವರು ದೊಣ್ಣೆಯ ಮೂಲಕ ಗೂಳಿಗೆ ಹೊಡೆದಿದ್ದಾರೆ.

ಗೂಳಿಯಿಂದಾಗಿ ಮೂವರು ಗಾಯಗೊಂಡಿದ್ದು, ಮೊಮ್ಮಗ ತನ್ನ ಅಜ್ಜಿಯನ್ನು ರಕ್ಷಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp