ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು 3,324 ಹೊಸ ಕೋವಿಡ್ ಪ್ರಕರಣಗಳು ದಾಖಲು!
ಮಾರಕ ಕೊರೋನಾ ವೈರಸ್ ಅಬ್ಬರಕ್ಕೆ ನಲುಗಿ ಹೋಗಿದ್ದ ದೆಹಲಿಯಲ್ಲಿ ಕ್ರಮೇಣ ಸೋಂಕು ತಗ್ಗಿದ್ದು, ಇಂದು ದೆಹಲಿಯಲ್ಲಿ 3,324 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
Published: 15th October 2020 01:08 AM | Last Updated: 15th October 2020 01:08 AM | A+A A-

ಸಂಗ್ರಹ ಚಿತ್ರ
ನವದೆಹಲಿ: ಮಾರಕ ಕೊರೋನಾ ವೈರಸ್ ಅಬ್ಬರಕ್ಕೆ ನಲುಗಿ ಹೋಗಿದ್ದ ದೆಹಲಿಯಲ್ಲಿ ಕ್ರಮೇಣ ಸೋಂಕು ತಗ್ಗಿದ್ದು, ಇಂದು ದೆಹಲಿಯಲ್ಲಿ 3,324 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
ಆ ಮೂಲಕ ದೆಹಲಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,17,548ಕ್ಕೆ ಏರಿಕೆಯಾಗಿದೆ. ಅಂತೆಯೇ ಇಂದು ದೆಹಲಿಯಲ್ಲಿ 2,867 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಗುಣಮುಖರ ಸಂಖ್ಯೆ 2,89,747ಕ್ಕೆ ಏರಿಕೆಯಾಗಿದೆ. ಇಂದು ದೆಹಲಿಯಲ್ಲಿ 44 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೆಹಲಿಯಲ್ಲಿ ಕೊರೋನಾದಿಂದಾಗಿ 5,898 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಅಂತೆಯೇ ದೆಹಲಿಯಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 21,903ಕ್ಕೆ ಏರಿಕೆಯಾಗಿದೆ. ಇನ್ನು ದೆಹಲಿಯಲ್ಲಿ ಇಂದು 12,596 ಆರ್ ಟಿಪಿಸಿಆರ್ ಟೆಸ್ಟ್ ಗಳು ಮತ್ತು 44,354 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಗಳನ್ನು ನಡೆಸಲಾಗಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
12,596 RTPCR/CBNAAT/True Nat tests and 44,354 rapid antigen tests conducted today. 37,71,273 tests conducted so far: Government of Delhi https://t.co/md85r647ZJ
— ANI (@ANI) October 14, 2020