ಪಾಣಿಪತ್: ಶೌಚಾಲಯದಲ್ಲಿ ಪತ್ನಿಯನ್ನು ವರ್ಷದವರೆಗೆ ಕೂಡಿಹಾಕಿದ್ದ ಪತಿ; ಮಹಿಳಾ ತಂಡದಿಂದ ರಕ್ಷಣೆ!

ಶೌಚಾಲಯದಲ್ಲಿ ಪತಿಯಿಂದಲೇ ವರ್ಷದಿಂದ ಕೂಡಿಹಾಕಿದ್ದ ಮಹಿಳೆಯನ್ನು ಮಹಿಳಾ ರಕ್ಷಣೆ ಮತ್ತು ಬಾಲ್ಯವಿವಾಹ ತಡೆ ಅಧಿಕಾರಿಗಳ ತಂಡ ರಕ್ಷಿಸಿದ ಘಟನೆ ಹರ್ಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ರಿಶ್ಪುರ್ ಗ್ರಾಮದಲ್ಲಿ ನಡೆದಿದೆ.

Published: 15th October 2020 12:51 PM  |   Last Updated: 15th October 2020 01:32 PM   |  A+A-


Woman rescued

ಮಹಿಳೆಯ ರಕ್ಷಣೆ

Posted By : Sumana Upadhyaya
Source : ANI

ಪಾಣಿಪತ್: ಶೌಚಾಲಯದಲ್ಲಿ ಪತಿಯಿಂದಲೇ ವರ್ಷದಿಂದ ಕೂಡಿಹಾಕಿದ್ದ ಮಹಿಳೆಯನ್ನು ಮಹಿಳಾ ರಕ್ಷಣೆ ಮತ್ತು ಬಾಲ್ಯವಿವಾಹ ತಡೆ ಅಧಿಕಾರಿಗಳ ತಂಡ ರಕ್ಷಿಸಿದ ಘಟನೆ ಹರ್ಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ರಿಶ್ಪುರ್ ಗ್ರಾಮದಲ್ಲಿ ನಡೆದಿದೆ.

ಮಹಿಳೆಯರ ರಕ್ಷಣೆ ಮತ್ತು ಬಾಲ್ಯವಿವಾಹ ತಡೆ ಅಧಿಕಾರಿ ರಜನಿ ಗುಪ್ತಾ ಎಎನ್ ಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿ, ಮಾಹಿತಿ ಸಿಕ್ಕಿದ ಕೂಡಲೇ ನಮ್ಮ ತಂಡ ಗ್ರಾಮಕ್ಕೆ ಹೋಗಿ ಮಹಿಳೆಯನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ.

ಒಂದು ವರ್ಷದಿಂದ ಮಹಿಳೆಯೊಬ್ಬರನ್ನು ಶೌಚಾಲಯದಲ್ಲಿ ಕೂಡಿಹಾಕಲಾಗಿದೆ ಎಂಬ ಮಾಹಿತಿ ನನಗೆ ಸಿಕ್ಕಿತು. ಇಲ್ಲಿಗೆ ನಮ್ಮ ತಂಡದ ಜೊತೆಗೆ ಬಂದೆನು. ನಾವಿಲ್ಲಿಗೆ ಬಂದು ನೋಡಿದಾಗ ಸುದ್ದಿ ನಿಜವೆಂದು ತಿಳಿದು ಆಘಾತವಾಯಿತು. ಹಲವು ದಿನಗಳಿಂದ ಮಹಿಳೆ ಏನೂ ತಿಂದಿರಲಿಲ್ಲ ಎಂದು ರಜನಿ ಗುಪ್ತಾ ತಿಳಿಸಿದ್ದಾರೆ.

ಮಹಿಳೆ ಮಾನಸಿಕ ಅಸ್ವಸ್ಥತೆ ಎಂದು ಹೇಳುತ್ತಿದ್ದಾರೆ, ಆದರೆ ಅದು ಸುಳ್ಳು.ನಾವು ಆಕೆಯನ್ನು ಮಾತನಾಡಿಸಿದಾಗ ನಮಗೆ ಹಾಗೆ ಅನ್ನಿಸಲಿಲ್ಲ. ಹಾಗಾಗಿ ಆಕೆ ಅಸ್ವಸ್ಥೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಶೌಚಾಲಯದೊಳಗೆ ಆಕೆಯನ್ನು ಕೂಡಿ ಹಾಕಲಾಗಿತ್ತು. ನಾವು ರಕ್ಷಿಸಿ ಆಕೆಯ ತಲೆಗೂದಲು ತೊಳೆದೆವು. ಪೊಲೀಸ್ ದೂರು ದಾಖಲಿಸಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಮಹಿಳೆಯ ಪತಿ, ಆಕೆ ಮಾನಸಿಕ ಅಸ್ವಸ್ಥತೆ, ಹೊರಗೆ ಕುಳಿತುಕೊಳ್ಳು ಎಂದು ನಾವು ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ವೈದ್ಯರ ಬಳಿಗೆ ಹೋಗಿ ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆಕೆ ಮಾನಸಿಕ ಅಸ್ವಸ್ಥಳೇ ಎಂದು ವೈದ್ಯರ ಸಲಹೆಯನ್ನು ಪೊಲೀಸರು ಪಡೆಯುತ್ತಾರೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp