ಕದನವಿರಾಮ ಉಲ್ಲಂಘನೆ ವೇಳೆ ನಾಗರಿಕರ ರಕ್ಷಣೆಗೆ 120 ಬಂಕರ್ ಗಳ ನಿರ್ಮಾಣಕ್ಕೆ ಭಾರತೀಯ ಸೇನೆ ಮುಂದು

ಪಾಕಿಸ್ತಾನದ ಅಪ್ರಚೋದಿತ ದಾಳಿಗಳಿಂದಾಗಿ ಗಡಿಯಲ್ಲಿ ಸಾಕಷ್ಟು ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಇಂತಹ ಸಾವುಗಳನ್ನು ತಡೆಯುವ ಉದ್ದೇಶದಿಂದ ಭಾರತೀಯ ಸೇನೆ ಗಡಿಯಲ್ಲಿ 120 ಹೊಸ ಬಂಕರ್ ಗಳ ನಿರ್ಮಾಣಕೆ ಮುಂದಾಗಿದೆ.
ಬಂಕರ್ ನಿರ್ಮಾಣ
ಬಂಕರ್ ನಿರ್ಮಾಣ

ಶ್ರೀನಗರ: ಪಾಕಿಸ್ತಾನದ ಅಪ್ರಚೋದಿತ ದಾಳಿಗಳಿಂದಾಗಿ ಗಡಿಯಲ್ಲಿ ಸಾಕಷ್ಟು ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಇಂತಹ ಸಾವುಗಳನ್ನು ತಡೆಯುವ ಉದ್ದೇಶದಿಂದ ಭಾರತೀಯ ಸೇನೆ ಗಡಿಯಲ್ಲಿ 120 ಹೊಸ ಬಂಕರ್ ಗಳ ನಿರ್ಮಾಣಕೆ ಮುಂದಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಎಲ್ ಒಸಿ ಕರ್ಣಾದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಬಿಲಾಲ್ ಭಟ್ ಅವರು, ಕದನ ವಿರಾಮ ಉಲ್ಲಂಘನೆ ವೇಳೆ ನಡೆದ ಶೆಲ್ ದಾಳಿ ಮತ್ತು ಗುಂಡಿನ ದಾಳಿಗಳಲ್ಲಿ ಸಾಕಷ್ಟು ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಈ ವರ್ಷದ ಜುಲೈನಲ್ಲಿ, ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ  ಇಬ್ಬರು ಸಾವನ್ನಪ್ಪಿ, ಒಬ್ಬರು ಗಾಯಗೊಂಡಿದ್ದರು. ಇಂತಹ ಸಾವುನೋವು ಕಡಿಮೆ ಮಾಡುವ ಉದ್ದೇಶದಿಂದ ಸೇನೆ ಮತ್ತು ಭಾರತ ಸರ್ಕಾರ ಎಲ್ ಒಸಿ 120 ಬಂಕರ್ ಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಈಗಾಗಲೇ ಬಂಕರ್ ನಿರ್ಮಾಣಕ್ಕೆ ಕೇಂದ್ರ ಗೃಹ ಇಲಾಖೆ ಅನುಮೋದನೆ ನೀಡಿದ್ದು, 120 ಬಂಕರ್ ಗಳ  ಪೈಕಿ 75 ಬಂಕರ್ ಗಳ ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರದಲ್ಲೇ ಬಾಕಿ ಬಂಕರ್ ಗಳ ನಿರ್ಮಾಣ ಕಾರ್ಯ ಕೂಡ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪಾಕ್ ಸೇನೆಯ ಅಪ್ರಚೋದಿತ ಕದನವಿರಾಮ ಉಲ್ಲಂಘನೆಯಿಂದಾಗಿ ಭಾರತ ಸರ್ಕಾರ 60 ದೊಡ್ಡ ಸಮುದಾಯ ಬಂಕರ್ ಗಳ ನಿರ್ಮಾಣಕ್ಕೆ ಪ್ರಸ್ತಾಪಿಸಿತ್ತು. ಆದರೆ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಮತ್ತು ನಾಗರಿಕರ ಸಾವು-ನೋವು ಹೆಚ್ಚಾದ ಪರಿಣಾಮ ಈ  ಸಂಖ್ಯೆಯನ್ನು 120ಕ್ಕೆ ಏರಿಕೆ ಮಾಡಲಾಯಿತು. ಈ ಒಂದೊಂದು ಸಮುದಾಯ ಬಂಕರ್ ಗಳಲ್ಲಿ ಸುಮಾರು 50 ರಿಂದ 60 ಜನರಿಗೆ ವಸತಿ ಕಲ್ಪಿಸಬಹುದಾಗಿದೆ. ಇಂತಹ ದೊಡ್ಡ ಬಂಕರ್ ಗಳ ನಿರ್ಮಾಣಕ್ಕೆ 10 ಲಕ್ಷ ರೂ.ಗಳು ವೆಚ್ಚವಾಗಲಿದ್ದು, ಗುಂಡುಗಳನ್ನು ತಡೆದುಕೊಳ್ಳಬಲ್ಲ ಕಾಂಕ್ರೀಟ್‌ನಿಂದ ಬಂಕರ್‌ಗಳನ್ನು  ತಯಾರಿಸಲಾಗುತ್ತದೆ ಎಂದು ಭಟ್ ಮಾಹಿತಿ ನೀಡಿದರು.

ಸುಮಾರು 70,000 ಜನಸಂಖ್ಯೆಯನ್ನು ಹೊಂದಿರುವ ತಂಗ್ಧರ್ ಸೆಕ್ಟರ್ ಕುಪ್ವಾರಾ ಜಿಲ್ಲೆಯ ಒಂದು ಭಾಗವಾಗಿದೆ. ಇದು ಒಂದು ವಿಶಿಷ್ಟವಾದ ಭೌಗೋಳಿಕ ಸ್ಥಳವನ್ನು ಹೊಂದಿದ್ದು, ಪಾಕಿಸ್ತಾನದ ಭೂಪ್ರದೇಶವು ಮೂರು ಕಡೆಗಳಿಂದ ಉತ್ತರದ ನೀಲಂ ಕಣಿವೆಯೊಂದಿಗೆ ಮತ್ತು ದಕ್ಷಿಣದ ಲೀಪಾ ಕಣಿವೆಯೊಂದಿಗೆ  ಸುತ್ತುವರೆದಿದೆ. ಸೇನಾಧಿಕಾರಿಗಳ ಪ್ರಕಾರ, ಈ ಸ್ಥಳವು ಕಾಶ್ಮೀರ ಕಣಿವೆಯನ್ನು ಪ್ರವೇಶಿಸುವ ಅತ್ಯಂತ ಸುಲಭ ಮಾರ್ಗವಾಗಿದೆ ಮತ್ತು ಆದ್ದರಿಂದ ಭಯೋತ್ಪಾದಕರನ್ನು ಈ ಮಾರ್ಗವಾಗಿ ಭಾರತಕ್ಕೆ ರವಾನಿಸಲು ಪಾಕಿಸ್ತಾನ ಸೇನೆ ನಿಯಮಿತವಾಗಿ ಅಪ್ರಚೋದಿತ ದಾಳಿ ಮಾಡುತ್ತಿರುತ್ತದೆ. ಆದರೆ, ಕದನ ವಿರಾಮ  ಉಲ್ಲಂಘನೆಯಾದಾಗಲೆಲ್ಲಾ ಭಾರತೀಯ ಸೇನೆಯು ಸೂಕ್ತ ಉತ್ತರ ನೀಡುತ್ತದೆ.

ಈ ಸ್ಥಳವನ್ನು ಸಾಧನಾ ಪಾಸ್ ಮೂಲಕ 10,000 ಅಡಿಗಳಿಗಿಂತ ಹೆಚ್ಚು ಎತ್ತರದ ಕಾಶ್ಮೀರದೊಂದಿಗೆ ಸಂಪರ್ಕಿಸಬಹುದಾಗಿದೆ. ಇದೇ ಪ್ರದೇಶದ ಮೂಲಕವೇ 2019 ರ ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆಯ ಯೋಧರು  ಪಾಕಿಸ್ತಾನದ ಬಾಲಕೋಟ್‌ ಮೇಲೆ ದಾಳಿ ಮಾಡಿ ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com