ನಿತೀಶ್ ಮುಕ್ತ ಬಿಹಾರಕ್ಕಾಗಿ ಮೊದಲು ಎಲ್ ಜೆಪಿ ನಂತರ ಬಿಜೆಪಿಗೆ ಮತ ಚಲಾಯಿಸಿ- ಚಿರಾಗ್ ಪಾಸ್ವಾನ್

 ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ , ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ
ಚಿರಾಗ್ ಪಾಸ್ವಾನ್
ಚಿರಾಗ್ ಪಾಸ್ವಾನ್

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ , ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಬುಧವಾರ ಮೊದಲ ಹಂತದ ಚುನಾವಣೆ ನಡೆಯಲಿದ್ದು, ವಿವಿಧ ಪಕ್ಷಗಳ ಮುಖಂಡರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ನಿತೀಶ್ ಮುಕ್ತ ಬಿಹಾರಕ್ಕಾಗಿ ಮೊದಲು ಎಲ್ ಜೆಪಿ ನಂತರ ಬಿಜೆಪಿಗೆ ಮತ ಚಲಾಯಿಸಿ ಎಂದು ಎಲ್ ಜೆಪಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇಂದು ಬೆಳಗ್ಗೆ ಸೀತಾಮರ್ಹಿಯ ಪೂನೌರಾ ಧಾಮದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿರಾಗ್ ಪಾಸ್ವಾನ್, ರಾಮಮಂದಿರಕ್ಕಿಂತ ದೊಡ್ಡದಾದ ದೇವಾಲಯವನ್ನು ಸೀತಾಮರ್ಹಿಯಲ್ಲಿ ಸೀತೆ ದೇವಿಗಾಗಿ ನಿರ್ಮಿಸಬೇಕೆಂದು ಬಯಸುತ್ತೇನೆ.  ಸೀತಾ ದೇವಿಯಿಲ್ಲದೆ  ರಾಮ ಅಪೂರ್ಣ, ಆದ್ದರಿಂದ, ಅಯೋಧ್ಯೆಯ ರಾಮ ದೇವಾಲಯ ಮತ್ತು ಸೀತಾಮರ್ಹಿಯನ್ನು ಸಂಪರ್ಕಿಸುವ ಕಾರಿಡಾರ್ ನಿರ್ಮಿಸಬೇಕು ಎಂದು ಹೇಳಿದರು.

ಬಿಹಾರದ ಎಲ್ಲಾ ಜನರ ಸೇವೆ ಮಾಡುವುದು ನಮ್ಮ ಧರ್ಮ.ಇದಕ್ಕೂ ಹಿಂದೆ ಬಿಹಾರದಲ್ಲಿನ ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು. ಅಪರಾಧ ಸಂಖ್ಯೆ ಹೆಚ್ಚಿತ್ತು, ಪ್ರಗತಿ ದರ ಸಮಾನವಾಗಿರಲಿಲ್ಲ, ಎಲ್ಲಾವನ್ನು ನಾವು ನಿಯಂತ್ರಣಕ್ಕೆ ತಂದಿದ್ದೇವೆ. ನ್ಯಾಯಯೊಂದಿಗೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ನಿತೀಶ್  ಕುಮಾರ್  ಸಂಪೂರ್ಣವಾಗಿ ಶಕ್ತಿಹೀನರಾಗಿದ್ದಾರೆ. ಅವರ ಮಾಗಿದ, ಬೇಸರದ, ನೀರಸ, ಹಳೆಯ ಮತ್ತು ಕ್ಲೀಷೆಯ ವಿಷಯಗಳು ಸಾರ್ವಜನಿಕರನ್ನು ಸೆಳೆದಿವೆ. ದಣಿದ ನಿತೀಶ್ ಕುಮಾರ್ ವಾಸ್ತವ, ತರ್ಕ ಮತ್ತು ಸತ್ಯಗಳಿಂದ ಪಲಾಯನ ಮಾಡುತ್ತಿದ್ದಾರೆ. ಬಿಹಾರದ ಕೋಟ್ಯಂತರ ಯುವಕರ ವರ್ತಮಾನ ಮತ್ತು ಭವಿಷ್ಯವನ್ನು ಹಾಳುಮಾಡುವ ಮೂಲಕ ಅವರು ಇತಿಹಾಸದ ಹಳೆಯ ಪುಟಗಳತ್ತ ತಿರುಗುತ್ತಿದ್ದಾರೆ ಎಂದು ಆರ್ ಜೆಡಿ ಪಕ್ಷದ ಮುಖಂಡ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com