ಆ್ಯಪ್ ಗೆ ವಿಡಿಯೋ ಮಾಡುತ್ತ 5 ವರ್ಷದ ಮಗುವನ್ನು ಹತ್ಯೆ ಮಾಡಿದ ಬಾಲಕ!

5 ವರ್ಷದ ಮಗು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಪೊಲೀಸರು ಮಗುವನ್ನು ಹತ್ಯೆ ಮಾಡಿದ್ದ ಬಾಲಕನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. 

Published: 26th October 2020 06:37 PM  |   Last Updated: 26th October 2020 06:37 PM   |  A+A-


Hyderabad police nab teenager who killed child after failed attempt to shoot video for app

ಆ್ಯಪ್ ಗೆ ವಿಡಿಯೋ ಮಾಡುತ್ತ 5 ವರ್ಷದ ಮಗುವನ್ನು ಹತ್ಯೆ ಮಾಡಿದ ಬಾಲಕ!

Posted By : Srinivas Rao BV
Source : Online Desk

ಹೈದರಾಬಾದ್: 5 ವರ್ಷದ ಮಗು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಪೊಲೀಸರು ಮಗುವನ್ನು ಹತ್ಯೆ ಮಾಡಿದ್ದ ಬಾಲಕನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. 

ಮೊಬೈಲ್ ಆ್ಯಪ್ ಗೆ ಅಪ್ ಲೋಡ್ ಮಾಡಲು ವಿಡಿಯೋ ತೆಗೆಯುವಾಗ 5 ವರ್ಷದ ಮಗುವನ್ನು ಕೊಂದಿರುವುದಾಗಿ 17 ವರ್ಷದ ಬಾಲಕ ಒಪ್ಪಿಕೊಂಡಿದ್ದಾನೆ.

ಹೈದರಾಬಾದ್ ನ ಶಮೀರ್ ಪೇಟ್ ನಲ್ಲಿ ಅ.15 ರಂದು ಈ ಘಟನೆ ನಡೆದಿದೆ.

ಮಗು ಅಧ್ಯಾನ್ ನ ವಿಡಿಯೋ ತೆಗೆದು ಶೇರ್ ಚಾಟ್ ಆಪ್ ನಲ್ಲಿ ಅಪ್ಲೋಡ್ ಮಾಡಲು ಯತ್ನಿಸಿದ ವೇಳೆ ಮಗು ಕೆಳಗೆ ಬಿದ್ದು ತಲೆಗೆ ಪೆಟ್ಟು ಮಾಡಿಕೂಂಡಿತ್ತು. ಇದರಿಂದ ಆ ಮಗುವಿನ ಪೋಷಕರು ತನ್ನನ್ನು ಥಳಿಸಬಹುದೆಂದು ಭಯಪಟ್ಟು ಮಗುವನ್ನು ಸಾಯಿಸಿದ್ದಾಗಿ 17 ವರ್ಷದ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ.

ಮಗುವನ್ನು ಕೊಂದು ಬಳಿಕ ಬ್ಯಾಗ್ ನಲ್ಲಿ ಹಾಕಿ ಒಆರ್ ಆರ್ ವರೆಗೂ ಆಟೋ ರಿಕ್ಷಾದಲ್ಲಿ ತೆರಳಿ ಅಲ್ಲಿಯೇ ಬ್ಯಾಗ್ ಎಸೆದು ಮನೆಗೆ ವಾಪಸ್ಸಾಗಿದ್ದಾನೆ. ಬಾಲಕನಿಂದ ಈ ಮಾಹಿತಿ ಪಡೆದ ಪೊಲೀಸರು ಮಗುವ ಪಾರ್ಥಿವ ಶರೀರವನ್ನು ಪತ್ತೆ ಮಾಡಿದ್ದಾರೆ.

ಕೊಲೆಯಾಗಿರುವ ಮಗು ಹಾಗೂ ಆರೋಪಿ ಬಾಲಕ ಇಬ್ಬರೂ ಒಂದೇ ಬಿಲ್ಡಿಂಗ್ ನಲ್ಲಿರುವ ಮನೆಗಳಲ್ಲಿ ಬಾಡಿಗೆಗೆ ಇದ್ದರು.

ಈ ನಡುವೆ ಅ.23 ರಂದು ಬಿಲ್ಡಿಂಗ್ ನ ಮಾಲಿಕರಿಗೆ ಅನಾಮಿಕ ಕರೆ ಬಂದಿದ್ದು ಅಧ್ಯಾನ್ ನ್ನು ಬಿಡುಗಡೆ ಮಾಡಬೇಕಾದರೆ 15 ಲಕ್ಷ ರೂಪಾಯಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಕರೆ ಬಂದಿದ್ದ ನಂಬರ್ ನ್ನು ಪರಿಶೀಲಿಸಿದಾಗ ಅದು ಬಾಲಕನ ಹೆಜ್ಜೆ ಗುರುತನ್ನು ತೋರಿದೆ. ಬಾಲಕನ ಹೇಳಿಕೆಯಿಂದ ಅಧ್ಯಾನ್ ನ ಶವ ಪತ್ತೆಯಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಎವಿಆರ್ ನರಸಿಂಹ ರಾವ್ ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp