ರಾಷ್ಟ್ರ ಧ್ವಜದ ಕುರಿತು ಮುಫ್ತಿ ಮೆಹಬೂಬಾ ಹೇಳಿಕೆ: ಪಿಡಿಪಿಗೆ 3 ಹಿರಿಯ ನಾಯಕರು 'ಗುಡ್ ಬೈ'!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಅರ್ಟಿಕಲ್ 370 ಪುನಃಸ್ಥಾಪನೆ ಕುರಿತು ಪಣ ತೊಟ್ಟಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರಂಭದಲ್ಲೇ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಮುಫ್ತಿ ಅವರ ನಡೆ ವಿರೋಧಿಸಿ ಪಿಡಿಪಿ ಪಕ್ಷದ ಮೂವರು ಹಿರಿಯ ನಾಯಕರು ರಾಜಿನಾಮೆ ನೀಡಿದ್ದಾರೆ.

Published: 27th October 2020 08:49 AM  |   Last Updated: 27th October 2020 12:19 PM   |  A+A-


Mehbooba Mufti

ಮೆಹಬೂಬಾ ಮುಫ್ತಿ

Posted By : Srinivasamurthy VN
Source : PTI

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಅರ್ಟಿಕಲ್ 370 ಪುನಃಸ್ಥಾಪನೆ ಕುರಿತು ಪಣ ತೊಟ್ಟಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರಂಭದಲ್ಲೇ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಮುಫ್ತಿ ಅವರ ನಡೆ ವಿರೋಧಿಸಿ ಪಿಡಿಪಿ ಪಕ್ಷದ ಮೂವರು ಹಿರಿಯ ನಾಯಕರು ರಾಜಿನಾಮೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಈ ಹಿಂದೆ ಇದ್ದ ರಾಜ್ಯ ಧ್ವಜವನ್ನು ಮರಳಿ ಅಧಿಕೃತಗೊಳಿಸುವವರೆಗೂ ತಾವು ರಾಷ್ಟ್ರಧ್ವಜ ಹಾರಿಸುವುದಿಲ್ಲ ಎಂಬ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿಕೆಗೆ ತಮ್ಮದೇ ಪಕ್ಷದಲ್ಲಿ ಆಕ್ರೋಶ ಭುಗಿಲೆದ್ದಿದೆ. ಮುಫ್ತಿ ಹೇಳಿಕೆಯನ್ನು ಖಂಡಿಸಿ, ಪಿಡಿಪಿ ಪಕ್ಷದ ಮೂವರು ಹಿರಿಯ ನಾಯಕರು ಪಕ್ಷ  ತ್ಯಜಿಸಿದ್ದಾರೆ. ಪಿಡಿಪಿ ಹಿರಿಯ ನಾಯಕರಾದ ಟಿಎಸ್ ಭಜ್ವಾ, ವೇದ್ ಮಹಾಜನ್ ಹಾಗೂ ಹುಸೇನ್ ವಫ್ಫಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ತಮ್ಮ ರಾಜಿನಾಮೆ ಕುರಿತು ಮಾತನಾಡಿರುವ ಪಿಡಿಪಿಯ ರೆಬೆಲ್ ನಾಯಕರು, 'ಭಾರತದ ತ್ರಿವರ್ಣ ಧ್ವಜದ ಕುರಿತು ಮೆಹಬೂಬಾ ಮುಫ್ತಿ ನೀಡಿರುವ ಹೇಳಿಕೆಯಿಂದ ತೀವ್ರ ನೋವಾಗಿದೆ. ನಾವು ಭಾರತದ ಆಡಳಿತದೊಂದಿಗೆ ಅದೆಷ್ಟೇ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ಭಾರತದ ತ್ರಿವರ್ಣ ಧ್ವಜದೊಂದಿಗೆ  ಕಳಚಲಾರದ ಸಂಬಂಧವನ್ನು ಹೊಂದಿದ್ದೇವೆ. ನಮಗೆ ಭಾರತದ ತ್ರಿವರ್ಣ ಧ್ವಜ ಮಾತ್ರವೇ ಎಲ್ಲಕ್ಕಿಂತಲೂ ಮಿಗಿಲಾದುದು. ನಮ್ಮ ಹೋರಾಟ ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧವೇ ಹೊರತು, ಭಾರತದ ತ್ರಿವರ್ಣ ಧ್ವಜದ ವಿರುದ್ಧ ಅಲ್ಲ. ಹೀಗಾಗಿ ಮೆಹಬೂಬಾ ಮುಫ್ತಿ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು  ಹೇಳಿದ್ದಾರೆ.

ಅಂತೆಯೇ ಮೆಹಬೂಬಾ ಮುಫ್ತಿ ಗೃಹ ಬಂಧನದಿಂದ ಬಿಡುಗಡೆಯಾದ ಬಳಿಕ ಕೆಲವು ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಅವರ ನಿಲುವುಗಳನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ಈ ನಾಯಕರು ಸ್ಪಷ್ಟಪಡಿಸಿದ್ದಾರೆ.

ಇನ್ನು ರಾಷ್ಟ್ರಧ್ವಜದ ಕುರಿತ ಮುಫ್ತಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಮ್ಮುವಿನಲ್ಲಿರುವ ಪಿಡಿಪಿ ಕಚೇರಿಗೆ ಮುತ್ತಿಗೆ ಹಾಕಿದ್ದ ಬಿಜೆಪಿ ಕಾರ್ಯಕರ್ತರು, ಕಚೇರಿ ಮುಂಭಾಗ ಭಾರತದ ತ್ರಿವರ್ಣ ಧ್ವಜ ಹಾರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp