ನೂತನ ಕೃಷಿ ಮಸೂದೆ: ನವಂಬರ್ 5 ರಂದು ದೇಶಾದ್ಯಂತ ರಸ್ತೆತಡೆ ನಡೆಸಲು ರೈತ ಸಂಘಟನೆಗಳ ತೀರ್ಮಾನ

ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಲವು ರೈತ ಸಂಘಟನೆಗಳು ನವೆಂಬರ್ 5ರಂದು ದೇಶಾದ್ಯಂತ ರಸ್ತೆ ತಡೆ ನಡೆಸುವುದಾಗಿ ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಲವು ರೈತ ಸಂಘಟನೆಗಳು ನವೆಂಬರ್ 5ರಂದು ದೇಶಾದ್ಯಂತ ರಸ್ತೆ ತಡೆ ನಡೆಸುವುದಾಗಿ ತಿಳಿಸಿವೆ.

ದೆಹಲಿಯಲ್ಲಿ ನಿನ್ನೆ ನಡೆದ ಸಭೆಯಲ್ಲಿ, ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ, ಜನ ವಿರೋಧಿ ಕೃಷಿ ಮಸೂದೆ ಮತ್ತು ಉದ್ದೇಶಿತ ವಿದ್ಯುದ್ದೀಕರಣ(ತಿದ್ದುಪಡಿ) ಮಸೂದೆ 2020ನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಲು ವಿವಿಧ ರೈತ ಸಂಘಟನೆಗಳ ಮಧ್ಯೆ ಸಂಪೂರ್ಣ ಸಮನ್ವಯತೆ ಸಾಧಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿವೆ.

500ಕ್ಕೂ ಹೆಚ್ಚು ಸಾಂಸ್ಥಿಕ ಸಂಘಟನೆಗಳನ್ನೊಳಗೊಂಡ ಪ್ರಮುಖ ರೈತ ಸಂಘಟನೆಗಳು, ಇಡೀ ಕಾರ್ಯಗುಂಪುಗಳು ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ರಾಜ್ಯ ಪ್ರತಿನಿಧಿಗಳು, ರೈತ ಮುಖಂಡ ಬಿಕೆಯು(ರಾಜೇವಲ್) ಬಲ್ಬೀರ್ ಸಿಂಗ್ ರಾಜೇವಲ್ ನೇತೃತ್ವದ ಸಂಘಟನೆಗಳು ಮತ್ತು ಹರ್ಯಾಣ ಬಿಕೆಯು ಮುಖ್ಯಸ್ಥ ಗುರ್ನಮ್ ಸಿಂಗ್ ನಿನ್ನೆ ದೆಹಲಿಯಲ್ಲಿ ಸಭೆ ನಡೆಸಿ ದೇಶಾದ್ಯಂತ ನವೆಂಬರ್ 5ರಂದು ರಸ್ತೆ ತಡೆ ನಡೆಸಲು ಮತ್ತು ನವೆಂಬರ್ 26-27ರಂದು ದೆಹಲಿಯಲ್ಲಿ 'ದೆಹಲಿ ಚಲೋ' ಕೈಗೊಳ್ಳಲು ತೀರ್ಮಾನಿಸಿವೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com