ಚೀನಾದಲ್ಲಿ ಲಡಾಖ್, ಜಮ್ಮು ಮತ್ತು ಕಾಶ್ಮೀರ ನಕ್ಷೆ ವಿವಾದ: ಭಾರತದ ಕ್ಷಮೆ ಕೋರಿದ ಟ್ವಿಟರ್!

ಭಾರತದ ಅವಿಭಾಜ್ಯ ಅಂಗಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರಗಳನ್ನು ಚೀನಾದಲ್ಲಿ ತೋರಿಸಿ ಟೀಕೆಗೆ ಗುರಿಯಾಗಿದ್ದ ಟ್ವಿಟರ್ ಸಂಸ್ಥೆ ಇದೀಗ ಭಾರತದ ಕ್ಷಮೆ ಕೋರಿದೆ.

Published: 29th October 2020 02:30 PM  |   Last Updated: 29th October 2020 02:30 PM   |  A+A-


joint parliamentary panel

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : ANI

ನವದೆಹಲಿ: ಭಾರತದ ಅವಿಭಾಜ್ಯ ಅಂಗಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರಗಳನ್ನು ಚೀನಾದಲ್ಲಿ ತೋರಿಸಿ ಟೀಕೆಗೆ ಗುರಿಯಾಗಿದ್ದ ಟ್ವಿಟರ್ ಸಂಸ್ಥೆ ಇದೀಗ ಭಾರತದ ಕ್ಷಮೆ ಕೋರಿದೆ.

ಈ ಕುರಿತಂತೆ ಭಾರತದ ಜಂಟಿ ಸಂಸದೀಯ ಸಮಿತಿಗೆ ಟ್ವಿಟರ್ ಸಂಸ್ಥೆಯ ವಕ್ತಾರರು ಮೌಖಿಕ ಕ್ಷಮೆಯಾಚಿಸಿದ್ದು, ಲಿಖಿತ ಉತ್ತರದಲ್ಲಿ ಈ ಕ್ಷಮೆ ಕೋರಲಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಟ್ವಿಟ್ಟರ್ ವಕ್ತಾರರು ಭಾರತ ಸರ್ಕಾರದೊಂದಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ದೇಶದ   ಸೂಕ್ಷ್ಮತೆಗಳನ್ನು ಗೌರವಿಸುತ್ತೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಅಂತೆಯೇ ಟ್ವಿಟರ್ ವಕ್ತಾರರು ಸಲ್ಲಿಕೆ ಮಾಡಿರುವ ಈ ಪತ್ರವನ್ನು ಜಂಟಿ ಸಂಸದೀಯ ಸಮಿತಿ ಸ್ವೀಕರಿಸಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಚೀನಾದಲ್ಲಿ ತೋರಿಸಿದ್ದ ಟ್ವಿಟರ್ ವಿರುದ್ಧ ಸಂಸತ್ ಸಮಿತಿ ಕೆಂಡಾಮಂಡಲವಾಗಿತ್ತು. ಈ ಬಗ್ಗೆ ಲಿಖಿತ ಪ್ರತಿಕ್ರಿಯೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಮಾಡುವಂತೆ ಸೂಚನೆ ಕೂಡ ನೀಡಿತ್ತು. 


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp