ಬಿಎಸ್‌ಪಿಯಿಂದ ವಿಧಾನಸಭೆ ಚುನಾವಣೆಗೆ ಟಿಕೆಟ್ ನಿರಾಕರಣೆ: ಆಕಾಂಕ್ಷಿ ವ್ಯಾಪಾರಿ ಆತ್ಮಹತ್ಯೆ

2022 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷದಿಂದ(ಬಿಎಸ್‌ಪಿ) ಟಿಕೆಟ್ ಪಡೆಯುವಲ್ಲಿ ವಿಫಲವಾಗಿರುವ ವ್ಯಾಪಾರಿಯೊಬ್ಬ ಗಾಜಿಪುರ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ
ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ

ಲಖನೌ: 2022 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷದಿಂದ(ಬಿಎಸ್‌ಪಿ) ಟಿಕೆಟ್ ಪಡೆಯುವಲ್ಲಿ ವಿಫಲವಾಗಿರುವ ವ್ಯಾಪಾರಿಯೊಬ್ಬ ಗಾಜಿಪುರ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಥಳೀಯ ಪೊಲೀಸರ ಮಾಹಿತಿಯಂತೆ, ಮೃತ ವ್ಯಕ್ತಿಯ ಬಳಿ ಡೆತ್‍ ನೋಟ್‍ ಸಹ ಪತ್ತೆಯಾಗಿದೆ. ಟಿಕೆಟ್‌ಗಾಗಿ ಬಿಎಸ್‌ಪಿ 2 ಕೋಟಿ ರೂ.ಕೇಳಿತ್ತು ಎಂದು ನತದೃಷ್ಟ ವ್ಯಾಪಾರಿ ಹೇಳಿದ್ದಾರೆ.

ವಿಶೇಷವಾಗಿ ಇತ್ತೀಚೆಗೆ ರಾಜ್ಯಸಭಾ ಚುನಾವಣೆಯಲ್ಲಿ ಬಿಎಸ್ ಪಿ ಅಭ್ಯರ್ಥಿ ರಾಮ್ ಜಿ ಗೌತಮ್ ಅವರ ನಾಮನಿರ್ದೇಶನಕ್ಕೆ ತಮ್ಮ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ಬಿಎಸ್ ಪಿಯ ಐವರು ಶಾಸಕರು ಆರೋಪಿಸಿರುವ ನಡುವೆಯೇ, ಈ ಡೆತ್‍ನೋಟ್ ಊಹಾಪೋಹಗಳಿಗೆ ಕಾರಣವಾಗಿದೆ.

ಡೆತ್‍ನೋಟ್‍ (ಆತ್ಮಹತ್ಯೆ ಪತ್ರ)ನಲ್ಲಿ ಉಲ್ಲೇಖಿಸಿರುವ ಸಂಗತಿಗಳ ಕುರಿತಂತೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದರ್ ಕೊಟ್ವಾಲಿ ಪ್ರದೇಶದ ಮಹಾರಾಜಗಂಜ್ ಗ್ರಾಮದಿಂದ ಈ ಪ್ರಕರಣ ವರದಿಯಾಗಿದೆ.

ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಿಎಸ್ ಪಿ ಮುಖಂಡ ಮುನ್ನು ತಥೆರಾ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ವರದಿಗಳು ತಿಳಿಸಿವೆ.

ಡೆತ್‍ನೋಟ್ ನಂತೆ 2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿಯಿಂದ ಸ್ಪರ್ಧಿಸಲು ಬಯಸಿದ್ದರು. ಟಿಕೆಟ್‌ಗಾಗಿ, ಪಕ್ಷದಿಮದ 2 ಕೋಟಿ ರೂ ಕೇಳಿದ್ದರು ಎಂದು ಆರೋಪಿಸಿದ್ದಾರೆ.

ದುರ್ದೈವಿ ಮುನ್ನು, 1987 ರಿಂದ ಬಿಎಸ್‍ಪಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಆತನ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com