ಕೋವಿಡ್-19: 24 ಗಂಟೆಗಳಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟಾರೆ ಸಾವಿನ ಸಂಖ್ಯೆಯ ಪೈಕಿ 5 ರಾಜ್ಯಗಳ ಪಾಲೇ ಶೇ.65ರಷ್ಟು!

ಮಾರಕ ಕೊರೋನಾ ವೈರಸ್ ಆರ್ಭಟ ದೇಶದಲ್ಲಿ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟಾರೆ ಸಾವಿನ ಸಂಖ್ಯೆಯ ಪೈಕಿ 5 ರಾಜ್ಯಗಳ ಪಾಲೇ ಶೇ.65ರಷ್ಟು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾರಕ ಕೊರೋನಾ ವೈರಸ್ ಆರ್ಭಟ ದೇಶದಲ್ಲಿ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟಾರೆ ಸಾವಿನ ಸಂಖ್ಯೆಯ ಪೈಕಿ 5 ರಾಜ್ಯಗಳ ಪಾಲೇ ಶೇ.65ರಷ್ಟು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟಾರೆ ಸಾವಿನ ಸಂಖ್ಯೆಯ ಪೈಕಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದ ಸಾವಿನ ಪ್ರಮಾಣ ದಾಖಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಸಂಭವಿಸಿದ ಒಟ್ಟಾರೆ ಕೋವಿಡ್-19 ಸಾವಿನ ಪ್ರಮಾಣದ ಪೈಕಿ ಈ 5 ರಾಜ್ಯಗಳಲ್ಲಿಯೇ ಶೇ.65ರಷ್ಟು ಸಾವು ದಾಖಲಾಗಿದೆ. ಸೋಮವಾರ ಮಹಾರಾಷ್ಟ್ರದಲ್ಲಿ 184 ಸೋಂಕಿತರು ಸಾವನ್ನಪ್ಪಿದ್ದು, ಕರ್ನಾಟಕವು 113, ತಮಿಳುನಾಡು 91, ಆಂಧ್ರಪ್ರದೇಶ 85 ಮತ್ತು ಉತ್ತರ ಪ್ರದೇಶದಲ್ಲಿ 63 ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟಾರೆ 819 ಕೋವಿಡ್ -19 ಸಾವುಗಳು ದಾಖಲಾಗಿವೆ. ಈ ಐದು ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ 536 ಕೋವಿಡ್-19 ಸಾವು ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 11,852 ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, ಆಂಧ್ರಪ್ರದೇಶದಲ್ಲಿ 10,004, ಕರ್ನಾಟಕದಲ್ಲಿ 6,495, ತಮಿಳುನಾಡಿನಲ್ಲಿ 5,956 ಮತ್ತು ಉತ್ತರ ಪ್ರದೇಶದಲ್ಲಿ 4,782 ಸೋಂಕು ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ದಾಖಲಾದ ಒಟ್ಟಾರೆ ಸೋಂಕಿತರ ಪೈಕಿ ಈ ಐದು ರಾಜ್ಯಗಳಲ್ಲಿಯೇ ಶೇ.56 ಸೋಂಕಿತರಿದ್ದಾರೆ. ಅಂತೆಯೇ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸೋಂಕಿನಿಂದ ಗುಣಮುಖರಾದ ಒಟ್ಟಾರೆ ಸೋಂಕಿತರ ಪೈಕಿ ಶೇ.56ರಷ್ಟು ಗುಣಮುಖರೂ ಕೂಡ ಈ ಐದು ರಾಜ್ಯಗಳಲ್ಲಿಯೇ ಇದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 11,158 ಸೋಂಕಿತರು ಗುಣಮುಖರಾಗಿದ್ದು, ಆಂಧ್ರಪ್ರದೇಶದಲ್ಲಿ 8,772, ಕರ್ನಾಟಕದಲ್ಲಿ 7,238, ತಮಿಳುನಾಡಿನಲ್ಲಿ 6,008 ಮತ್ತು ಉತ್ತರ ಪ್ರದೇಶದಲ್ಲಿ 4,597 ಸೋಂಕಿತರು ಗುಣಮುಖರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com