ಅಧಿವೇಶನಕ್ಕೆ ಇನ್ನೆರಡು ದಿನ ಬಾಕಿ: ತೆಲಂಗಾಣ ಹಣಕಾಸು ಮಂತ್ರಿಗೆ ಕೊರೋನಾ ಪಾಸಿಟಿವ್
ತೆಲಂಗಾಣ ವಿಧಾನಸಭೆ ಮುಂಗಾರು ಅಧಿವೇಶನಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಈ ನಡುವೆಯೇ ತೆಲಂಗಾಣ ಹಣಕಾಸು ಸಚಿವ ಟಿ ಹರೀಶ್ ರಾವ್ ಅವರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ.
Published: 05th September 2020 01:54 PM | Last Updated: 05th September 2020 01:54 PM | A+A A-

ಹರೀಶ್ ರಾವ್
ಹೈದರಾಬಾದ್: ತೆಲಂಗಾಣ ವಿಧಾನಸಭೆ ಮುಂಗಾರು ಅಧಿವೇಶನಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಈ ನಡುವೆಯೇ ತೆಲಂಗಾಣ ಹಣಕಾಸು ಸಚಿವ ಟಿ ಹರೀಶ್ ರಾವ್ ಅವರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ.
ಸೆಪ್ಟಂಬರ್ 7ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಹರೀಶ್ ರಾವ್ ಅವರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಹರೀಶ್ ರಾವ್ ಸೇರಿದಂತೆ ಹಲವು ಸಚಿವರುಗಳು ನಿರಂತರವಾಗಿ ಸಾರ್ವಜನಿಕರ ಸಂಪರ್ಕದಲ್ಲಿದ್ದರು. ಯಾವಾಗಲೂ ಮಾಸ್ಕ್ ಧರಿಸುತ್ತಿದ್ದರೂ ಮತ್ತು ಎಲ್ಲಾ ಮುಂಜಾರೂಕಾ ಕ್ರಮಗಳನ್ನು ಕೈಗೊಂಡರು ಅವರಿಗೆ ಕೊರೋನಾ ಸೋಂಕು ತಗುಲಿದೆ.
ಸಣ್ಣ ಪ್ರಮಾಣದಲ್ಲಿ ಕೊರೋನಾ ಗುಣ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಅವರಿಗೆ ಪರೀಕ್ಷೆ ಮಾಡಿದಾಗ ಕೊರೋನಾ ದೃಢ ಪಟ್ಟಿದೆ. ಹರೀಶ್ ರಾವ್ ಅವರ ಅನುಪಸ್ಥಿತಿಯಲ್ಲಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರೇ ವಿಧಾನಸಭೆಯಲ್ಲಿ ಹಣಕಾಸು ಇಲಾಖೆ ಕೆಲಸ ನಿರ್ವಹಿಸುವ ಸಾಧ್ಯತೆಯಿದೆ.