ಸಂಜಯ್ ರಾವತ್  ಶಿವಸೇನೆಯ ಮುಖ್ತ ವಕ್ತಾರರಾಗಿ ನೇಮಕ

ಶಿವಸೇನೆಯ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್  ಅವರನ್ನು ಪಕ್ಷದ ಮುಖ್ಯ ವಕ್ತಾರರಾಗಿ ನೇಮಕ ಮಾಡುವ ಮೂಲಕ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ಶಿವಸೇನೆಯ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್  ಅವರನ್ನು ಪಕ್ಷದ ಮುಖ್ಯ ವಕ್ತಾರರಾಗಿ ನೇಮಕ ಮಾಡುವ ಮೂಲಕ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.

2014ರಲ್ಲಿ ಸಂಜಯ್ ರಾವತ್  ಮತ್ತಿತರನ್ನು ಕೈ ಬಿಟ್ಟು ಹೊಸಬರಿಗೆ ಮಣೆ ಹಾಕಲಾಗಿತ್ತು. ಆದಾಗ್ಯೂ, ವಿಧಾನಸಭಾ ಚುನಾವಣೆ ನಂತರ ಉಂಟಾಗಿದ್ದ ಬಿಕ್ಕಟ್ಟು, ಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ನನ್ನು ಒಟ್ಟಿಗೆ ಸೇರಿಸಿ ಮಹಾ ವಿಕಾಸ್ ಆಘಾಡಿ ಸರ್ಕಾರವನ್ನು
ಅಸ್ತಿತ್ವಕ್ಕೆ ತರುವಲ್ಲಿ ಸಂಜಯ್ ರಾವತ್ ಮಹತ್ವದ ಪಾತ್ರ ವಹಿಸಿದ್ದರು.ರಾವತ್ ಶಿವಸೇನೆ ಮುಖವಾಣಿ ಸಾಮ್ನಾದ ಕಾರ್ಯಕಾರಿ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಅರವಿಂದ್ ಸಾವಂತ್, ಎಂಪಿ ಪ್ರಿಯಾಂಕ ಚತುರ್ವೇದಿ, ನೀಲಮ್ ಗೊರೆ ಸೇರಿದಂತೆ ಮತ್ತಿತರ 10 ಮಂದಿಯನ್ನು ಅಧಿಕೃತ ವಕ್ತಾರರನ್ನಾಗಿ ನೇಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com