ಪ್ಯಾಂಗಾಂಗ್ ತ್ಸೋನ ಫಿಂಗರ್ 4 ಪ್ರದೇಶ ವಶಕ್ಕೆ ಪಡೆದ ಭಾರತೀಯ ಸೇನೆ, ಚೀನಾಗೆ ರೆಡ್ ಲೈನ್ ಫಿಕ್ಸ್

ಲಡಾಖ್ ನ ಪ್ಯಾಂಗಾಂಗ್ ತ್ಸೋನ ಉತ್ತರ ದಂಡೆಯ ಫಿಂಗರ್ 4 ಪ್ರದೇಶವನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದ್ದು, ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ತನ್ನ ಸ್ಥಾನದಲ್ಲಿ ಮುಳ್ಳುತಂತಿ ಬೇಲಿ ಹಾಕುವ ಮೂಲಕ ಚೀನಾಗೆ ರೆಡ್ ಲೈನ್ ಫಿಕ್ಸ್ ಮಾಡಿದೆ.
ಲಡಾಕ್ ಗಡಿಯಲ್ಲಿ ಭಾರತೀಯ ಯೋಧ ಕಾವಲು ಕಾಯುತ್ತಿರುವುದು
ಲಡಾಕ್ ಗಡಿಯಲ್ಲಿ ಭಾರತೀಯ ಯೋಧ ಕಾವಲು ಕಾಯುತ್ತಿರುವುದು

ನವದೆಹಲಿ: ಲಡಾಖ್ ನ ಪ್ಯಾಂಗಾಂಗ್ ತ್ಸೋನ ಉತ್ತರ ದಂಡೆಯ ಫಿಂಗರ್ 4 ಪ್ರದೇಶವನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದ್ದು, ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ತನ್ನ ಸ್ಥಾನದಲ್ಲಿ ಮುಳ್ಳುತಂತಿ ಬೇಲಿ ಹಾಕುವ ಮೂಲಕ ಚೀನಾಗೆ ರೆಡ್ ಲೈನ್ ಫಿಕ್ಸ್ ಮಾಡಿದೆ.

ಇತ್ತೀಚಿಗೆ ಚೀನಾ ಈ ಪ್ರದೇಶವನ್ನು ವಶಕ್ಕೆ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿ ವಿಫಲವಾಗಿತ್ತು. ಅಲ್ಲದೇ ಚೀನಾ ಸೇನೆ ಉದ್ಧಟತನ ತೋರಿ ಪ್ರಚೋದನಕಾರಿ ವರ್ತನೆ ತೋರಿಸಿತ್ತು. ಆದರೆ ಚೀನಾಗೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತ ಪ್ಯಾಂಗಾಂಗ್ ತ್ಸೋ ಪ್ರದೇಶದ ಫಿಂಗರ್ 4 ಅನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ನಾವು ಈಗ ನಮ್ಮ ಸೈನಿಕರನ್ನು ಪಾಂಗೊಂಗ್ ತ್ಸೊದ ಉತ್ತರ ದಂಡೆಯಲ್ಲಿರುವ ಅತೀ ಎತ್ತರದ ಫಿಂಗರ್ 4ರ ಪ್ರದೇಶದಲ್ಲಿ ನಿಯೋಜಿಸಿದ್ದೇವೆ. ಇದರಿಂದ ಫಿಂಗರ್ 4 ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಚೀನಿಯರ ಪ್ರತಿ ಚಲನವಲನವನ್ನು ಭಾರತೀಯ ಸೇನೆ ಗಮನಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ಯಾಂಗಾಂಗ್ ಸರೋವರದ ದಂಡೆ ಪ್ರದೇಶ ಭಾರತೀಯ ಸೇನೆಯ ವಶದಲ್ಲಿದೆ. ಈ ಪ್ರದೇಶದ ಎತ್ತರದ ಸ್ಥಳಗಳ ಮೇಲೆ ಭಾರತ ತನ್ನ ಹಿಡಿತ ಸಾಧಿಸಿದ್ದು, ಚೀನಾ ಯಾವುದೇ ರೀತಿಯ ಆಕ್ರಮಣಕ್ಕೆ ಮುಂದಾದರೂ ಕೂಡಾ ಅದನ್ನು ವಿಫಲಗೊಳಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com