ಅನ್ಯಾಯದ ಟೀಕೆಗಳಿಗೆ ನ್ಯಾಯಾಧೀಶರು ಹೆಚ್ಚು ಗುರಿಯಾಗುತ್ತಾರೆ:ಸಿಜೆಐ ಎಸ್ ಎ ಬೊಬ್ಡೆ, ಜಸ್ಟೀಸ್ ಎನ್ ವಿ ರಮಣ

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ನ್ಯಾಯಾಧೀಶರು ಸುಲಭವಾಗಿ ಅಪಹಾಸ್ಯ, ಟೀಕೆಗಳಿಗೆ ಗುರಿಯಾಗುತ್ತಾರೆ, ಟೀಕಿಸುವ ಭರದಲ್ಲಿ ಅನೇಕ ರಸಭರಿತ ಗಾಸಿಪ್ ಗಳು ಬರುತ್ತವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ ಮತ್ತು ನ್ಯಾಯಾಧೀಶ ನ್ಯಾಯಮೂರ್ತಿ ಎನ್ ವಿ ರಮಣ ವಿಷಾದ ವ್ಯಕ್ತಪಡಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿ ಎನ್ ವಿ ರಮಣ
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿ ಎನ್ ವಿ ರಮಣ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ನ್ಯಾಯಾಧೀಶರು ಸುಲಭವಾಗಿ ಅಪಹಾಸ್ಯ, ಟೀಕೆಗಳಿಗೆ ಗುರಿಯಾಗುತ್ತಾರೆ, ಟೀಕಿಸುವ ಭರದಲ್ಲಿ ಅನೇಕ ರಸಭರಿತ ಗಾಸಿಪ್ ಗಳು ಬರುತ್ತವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ ಮತ್ತು ನ್ಯಾಯಾಧೀಶ ನ್ಯಾಯಮೂರ್ತಿ ಎನ್ ವಿ ರಮಣ ವಿಷಾದ ವ್ಯಕ್ತಪಡಿಸಿದ್ದಾರೆ.

ನ್ಯಾಯಾಧೀಶರು ತಮ್ಮ ರಕ್ಷಣೆಗೆ ಮುಕ್ತವಾಗಿ ಸಾರ್ವಜನಿಕವಾಗಿ ಮಾತನಾಡಲು ಸ್ವಯಂ ನಿರ್ಬಂಧ ಹೇರಿಕೊಳ್ಳುವುದರಿಂದ ಟೀಕೆಗೆ ಅವರು ಸುಲಭವಾಗಿ ಗುರಿಯಾಗುತ್ತಾರೆ ಎಂದು ನ್ಯಾಯಾಧೀಶ ನ್ಯಾಯಮೂರ್ತಿ ರಮಣ ಹೇಳುತ್ತಾರೆ.ನ್ಯಾಯಾಧೀಶರ ವಿರುದ್ಧದ ಟೀಕೆ, ಅಪಹಾಸ್ಯಗಳು ಹೆಚ್ಚಾಗಲು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧದ ಪ್ರಚಾರವೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಮುಂದಿನ ವರ್ಷ ಏಪ್ರಿಲ್ ನಲ್ಲಿ ನಿವೃತ್ತಿ ಹೊಂದಲಿದ್ದು ಅವರ ಸ್ಥಾನಕ್ಕೆ ನ್ಯಾಯಮೂರ್ತಿ ರಮಣ ಬರಲಿದ್ದಾರೆ.

ಇವರ ಮಾತಿಗೆ ಸಹಮತಿಯನ್ನು ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ಜನರ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ತಡೆಯೊಡ್ಡುವ ಕಾನೂನುಗಳೇ ನ್ಯಾಯಾಧೀಶರ ವಾಕ್ ಸ್ವಾತಂತ್ರ್ಯಕ್ಕೆ ತಡೆ ತರುತ್ತಿದೆ. ಇದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದರು.

ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶೆ ನ್ಯಾಯಮೂರ್ತಿ ಆರ್ ಬಾನುಮತಿ ಅವರು ಬರೆದಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಇವರು ಮಾತನಾಡಿದರು. ಸ್ವತಂತ್ರ ನ್ಯಾಯಾಂಗದ ಅಗತ್ಯವನ್ನು ಸಾರಿದ ಮುಖ್ಯ ನ್ಯಾಯಮೂರ್ತಿಗಳು, ಕಾರ್ಯಾಂಗದಿಂದ ಸ್ವಾತಂತ್ರ್ಯ ಪಡೆಯಲು ಮಾತ್ರವಲ್ಲ ಸ್ವತಂತ್ರ ನ್ಯಾಯಾಂಗ ಬೇಕಾಗಿರುವುದು, ಇತರ ಒತ್ತಡಗಳು ಮತ್ತು ಪೂರ್ವಾಗ್ರಹಪೀಡಿತದಿಂದ ಕಾಪಾಡಿಕೊಳ್ಳಲು ಸಹ ಬೇಕು, ನ್ಯಾಯಾಂಗ ಸ್ವಾತಂತ್ರ್ಯ ನ್ಯಾಯಾಧೀಶರ ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಬದಲಾಗಿ ನ್ಯಾಯಾಂಗದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ಪಟ್ಟಭದ್ರ ಹಿತಾಸಕ್ತಿಗಳಿಂದ ರಕ್ಷಿಸಿಕೊಳ್ಳಲು ಎಂದರು.

ನ್ಯಾಯಾಧೀಶರು ಐಷಾರಾಮಿ ಜೀವನ ಸಾಗಿಸುತ್ತಿರುತ್ತಾರೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ನನ್ನ ಸ್ವಂತ ಅನುಭವ ಪ್ರಕಾರ, ನ್ಯಾಯಾಧೀಶರುಗಳ ಜೀವನ ಹೂವಿನ ಹಾಸಿಗೆಯಲ್ಲ, ಜನರ ಗ್ರಹಿಕೆಗೆ ವಿಭಿನ್ನವಾಗಿ ನ್ಯಾಯಾಧೀಶರುಗಳ ಜೀವನವಿರುತ್ತದೆ. ಒಂದೇ ಕುಟುಂಬದ ಉತ್ತಮ ನ್ಯಾಯಾಧೀಶರ ಸಂಬಂಧಗಳಲ್ಲಿ, ಅಭಿಪ್ರಾಯಗಳಲ್ಲಿ ವ್ಯತ್ಯಾಸವಿರುತ್ತದೆ ಎಂದು ನ್ಯಾಯಮೂರ್ತಿ ರಮಣ ಹೇಳಿದರು.

ಇಬ್ಬರೂ ಹಿರಿಯ ನ್ಯಾಯಾಧೀಶರು ದೇಶಕ್ಕೆ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com