70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ಕೊರೋನಾ ವಾರಿಯರ್ ಥೀಮ್ ಕೇಕ್ ಸಿದ್ಧಪಡಿಸಿದ ಸೂರತ್ ಬೇಕರಿ!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಣೆಗಳನ್ನು ಮಾಡಲಾಗುತ್ತಿದೆ.

Published: 17th September 2020 12:52 PM  |   Last Updated: 17th September 2020 01:45 PM   |  A+A-


cake

ಕೇಕ್

Posted By : manjula
Source : ANI

ಸೂರತ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಣೆಗಳನ್ನು ಮಾಡಲಾಗುತ್ತಿದೆ. ಇದರಂತೆ ಗುಜರಾತ್ ರಾಜ್ಯದ ಸೂರತ್ ಬೇಕರಿಯೊಂದು 71 ಅಡಿ ಉದ್ದದ, 770 ಕೆಜಿ ತೂಕದ ಕೊರೋನಾ ವಾರಿಯರ್ ಥೀಮ್'ನೊಂದಿಗೆ ವಿಶೇಷ ಕೇಕ್ ವೊಂದನ್ನು ಸಿದ್ಧಪಡಿಸಿದೆ. 

ಕೇಕ್ ತಯಾರಿಸಿರುವ ಬೇಕರಿಯು ಡಿಜಿಟಲ್ ಕಾರ್ಯಕ್ರವನ್ನೂ ಕೂಡ ಹಮ್ಮಿಕೊಂಡಿದ್ದು, ಕೇಕ್ ಕಟ್ಟಿಂಗ್ ಕಾರ್ಯಕ್ರಮವನ್ನು ಡಿಜಿಟಲ್ ಮೂಲಕ ಪ್ರಸಾರ ಮಾಡಿದೆ. ಕೇಕ್ ಕತ್ತರಿಸಿದ ಬಳಿಕ ಮಕ್ಕಳಿಗೆ ಹಂಚಿದೆ. 

ಕಳೆದ 3 ವರ್ಷಗಳಿಂದಲೂ ಬ್ರೆಡ್ ಲೈನರ್ ಬೇಕರಿ ಮೋದಿಯವರು ಜನ್ಮದಿನಾಚರಣೆಯನ್ನು ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಆಚರಿಸಿಕೊಂಡು ಬರುತ್ತಿದೆ. ಈ ಬಾರಿ ಕೊರೋನಾ ವಾರಿಯರ್ಸ್'ಗಳಿಗೆ ಧನ್ಯವಾದ ಹೇಳುವ ಸಲುವಾಗಿ ಕೇಕ್ ತಯಾರಿಸಿದ್ದು, ಈ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದೆ. 

ಬೇಕರಿ ಮಾಲೀಕ ಪ್ರತಿಕ್ರಿಯೆ ನೀಡಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಲಾಗಿದೆ. ಕಾರ್ಯಕ್ರಮದಲ್ಲಿ ಹಲವಾರು ಕೊರೋನಾ ವಾರಿಯರ್ಸ್ ಕೂಡ ಹಾಜರಿದ್ದರು, ಕೇಕ್ ನಲ್ಲಿ ಕೊರೋನಾ ಯೋಧರ ಚಿತ್ರವನ್ನು ಬಿಡಿಸಲಾಗಿದೆ ಎಂದು ಹೇಳಿದ್ದಾರೆ. 

ಕೇಕ್ ಕತ್ತರಿಸಿದ ಬಳಿಕ ಮೊದಲು ಮಕ್ಕಳಿಕೆ ವಿತರಿಸಲಾಯಿತು. ಬಳಿಕ ಕೇಕನ್ನು ಅರ್ಧ ಕೇಜಿಗಳಂತೆ ಕತ್ತರಿಸಿ ಇತರೆ ಬೇಕರಿಗಳಿಗೆ ವಿತರಿಸಿ ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp