ಎನ್ಎಲ್ಎಸ್ಐಯು ಬೆಂಗಳೂರಿನ ಎನ್ಎಲ್ಎಟಿ-2020 ನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಬೆಂಗಳೂರಿನ ಎನ್ಎಲ್ಎಸ್ಐಯು ನ ಬಿಎ.ಎಲ್ಎಲ್ ಬಿ (ಆನರ್ಸ್) ಪ್ರವೇಶಕ್ಕೆ ನಡೆಸಲಾಗುತ್ತಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆ ಎನ್ಎಲ್ಎಟಿ-2020 ನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. 
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಬೆಂಗಳೂರಿನ ಎನ್ಎಲ್ಎಸ್ಐಯು ನ ಬಿಎ.ಎಲ್ಎಲ್ ಬಿ (ಆನರ್ಸ್) ಪ್ರವೇಶಕ್ಕೆ ನಡೆಸಲಾಗುತ್ತಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆ ಎನ್ಎಲ್ಎಟಿ-2020 ನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. 

ಎಲ್ಲಾ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲ (ಎನ್ಎಲ್ ಯುಎಸ್) ನಲ್ಲಿ ಪ್ರವೇಶವನ್ನು ಸೆ.28 ರಂದು ನಡೆಯಲಿರುವ ಸಿಎಲ್ಎಟಿ-2020 ಗೆ ಅನುಗುಣವಾಗಿಯೇ ನಡೆಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. 

ಎನ್ಎಲ್ಎಸ್ಐಯುನ ಮಾಜಿ ಉಪಕುಲಪತಿ ಪ್ರೊಫೆಸರ್ ಆರ್ ವೆಂಕಟ ರಾವ್ ಹಾಗೂ ಆಕಾಂಕ್ಷಿಯೊಬ್ಬರ ಪೋಷಕರು ಎನ್ಎಲ್ಎಟಿ-2020ಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಲ್ಲಿ ನ್ಯಾ. ಅಶೋಕ್ ಭೂಷಣ್ ಅವರಿದ್ದ ಪೀಠ ಈ ಆದೇಶ ನೀಡಿದೆ. 

ನ್ಯಾ.ಆರ್ ಎಸ್ ರೆಡ್ಡಿ ಹಾಗೂ ಎಂಆರ್ ಶಾ ಅವರಿದ್ದ ಪೀಠ, ಎನ್ಎಲ್ ಯು ಗಳು ಅಕ್ಟೋಬರ್ ಮಧ್ಯದ ವೇಳೆಗೆ ತಮ್ಮ ಶೈಕ್ಷಣಿಕ ತರಗತಿಗಳನ್ನು ಪ್ರಾರಂಭಿಸಬೇಕೆಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com