ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಮೋದಿ ಸರ್ಕಾರ ಹಾಳು ಮಾಡಿದೆ: ರಾಹುಲ್ ಗಾಂಧಿ
ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷ ಭಾರತದೊಂದಿಗೆ ಬೆಸೆದಿದ್ದ ನೆರೆ– ಹೊರೆಯ ರಾಷ್ಟ್ರಗಳ ಬಾಂಧವ್ಯ ಹಾಗೂ ಸಂಬಂಧಗಳ ಜಾಲವನ್ನು ಪ್ರಧಾನಿ ನರೇಂದ್ರ ಮೋದಿ ನಾಶಪಡಿಸಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Published: 23rd September 2020 02:21 PM | Last Updated: 23rd September 2020 05:11 PM | A+A A-

ರಾಹುಲ್ ಗಾಂಧಿ
ನವದೆಹಲಿ: ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷ ಭಾರತದೊಂದಿಗೆ ಬೆಸೆದಿದ್ದ ನೆರೆ– ಹೊರೆಯ ರಾಷ್ಟ್ರಗಳ ಬಾಂಧವ್ಯ ಹಾಗೂ ಸಂಬಂಧಗಳ ಜಾಲವನ್ನು ಪ್ರಧಾನಿ ನರೇಂದ್ರ ಮೋದಿ ನಾಶಪಡಿಸಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧ ದುರ್ಬಲಗೊಳ್ಳುತ್ತಿದ್ದು, ಚೀನಾದೊಂದಿಗಿನ ಒಪ್ಪಂದಗಳು ಬಲಗೊಳ್ಳುತ್ತಿವೆ’ ಎಂಬ ‘ದಿ ಎಕನಾಮಿಸ್ಟ್‘ ಪತ್ರಿಕೆಯ ಸುದ್ದಿಯ ತುಣಕನ್ನು ಟ್ಯಾಗ್ ಮಾಡಿ, ‘ನೆರೆ–ಹೊರೆಯಲ್ಲಿ ಸ್ನೇಹಿತರಿಲ್ಲದೇ ಜೀವಿಸುವುದು ತುಂಬಾ ಅಪಾಯ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
‘ನೆರೆಯ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯ ತುಂಬಾ ದುರ್ಬಲವಾಗಿದೆ’ ಎಂದು ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಕಾಂಗ್ರೆಸ್ ಟೀಕಿಸಿದೆ. ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ ಮತ್ತು ಭಾರತದ ಸಂಬಂಧಗಳು ಹಲವಾರು ದೇಶಗಳೊಂದಿಗೆ ಗಾಢವಾಗಿವೆ ಮತ್ತು ಜಾಗತಿಕವಾಗಿ ಅದರ ಸ್ಥಾನವು ಬಲಗೊಂಡಿದೆ ಎಂದು ತಿಳಿಸಿದೆ.