ಇನ್ಸ್ಟಾಗ್ರಾಮ್ ಲ್ಲಿ ಚೈಲ್ಡ್ ಪೊರ್ನೊಗ್ರಫಿ: ಉತ್ತರ ಪ್ರದೇಶ ಮೂಲದ ಎಂಜಿನಿಯರ್ ಬಂಧನ

ಇನ್ಸ್ಟಾಗ್ರಾಮ್ ಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ದಂಧೆ ( ಚೈಲ್ಡ್ ಪೊರ್ನೊಗ್ರಫಿ) ನಡೆಸುತ್ತಿದ್ದ ಉತ್ತರ ಪ್ರದೇಶ ಮೂಲದ ಎಂಜಿನಿಯರ್ ಒಬ್ಬವನ್ನು ಬಂಧಿಸಿರುವುದಾಗಿ ಸಿಬಿಐ ಶುಕ್ರವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇನ್ಸ್ಟಾಗ್ರಾಮ್ ಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ದಂಧೆ ( ಚೈಲ್ಡ್ ಪೊರ್ನೊಗ್ರಫಿ) ನಡೆಸುತ್ತಿದ್ದ ಉತ್ತರ ಪ್ರದೇಶ ಮೂಲದ ಎಂಜಿನಿಯರ್ ಒಬ್ಬವನ್ನು ಬಂಧಿಸಿರುವುದಾಗಿ ಸಿಬಿಐ ಶುಕ್ರವಾರ ತಿಳಿಸಿದೆ.

ಸೊನ್ ಬಾದ್ರದ ಅನ್ಪರಾ ನಿವಾಸಿ ನೀರಾಜ್ ಯಾದವ್ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದೆ. ಬಿಟೆಕ್ ನಲ್ಲಿ ಪದವಿ ಪಡೆದಿರುವ ಈತ ಲಾಕ್ ಡೌನ್ ಮುಂಚೆ ನವದೆಹಲಿ ಕೆಲಸ ಮಾಡುತ್ತಿದ್ದ ಎಂದು ಅವರು ಹೇಳಿದ್ದಾರೆ.

2019ರಿಂದಲೂ ಆನ್ ಲೈನ್ ದಂಧೆ ನಡೆಸುತ್ತಿದ್ದ ಯಾದವ್, ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಬಗ್ಗೆ ಪ್ರಚಾರ ಮಾಡುತ್ತಿದ್ದ. ಗ್ರಾಹಕರಿಂದ ಹಣ ಪಡೆದ ನಂತರ ವಾಟ್ಸಾಫ್, ಟೆಲಿಗ್ರಾಮ್, ಇನ್ಸ್ಟಾಗ್ರಾಮ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದ ಎನ್ನುವುದು ತಿಳಿದುಬಂದಿದೆ.

ಮಕ್ಕಳ ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ಶೋಷಣೆಯ ಅಂಶಗಳಿರುವ ವಿಡಿಯೋಗಳಿಗಾಗಿ ಆನ್ ಲೈನ್ ಗಳ ಮೂಲಕ ಹಣವನ್ನು ಪಡೆದುಕೊಳ್ಳುತ್ತಿದ್ದ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಈ ದಂಧೆಯಲ್ಲಿ ಮತ್ತಷ್ಟು ಜನರಿರುವ ಶಂಕೆಯಿದ್ದು, ಆತನಿಂದ ಸಂಪೂರ್ಣ  ಮಾಹಿತಿ ಕಲೆ ಹಾಕಲಾಗುತ್ತಿದೆ. ಆತನನ್ನು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ ಎಂದು ಸಿಬಿಐ ವಕ್ತಾರ ಆರ್. ಕೆ. ಗೌರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com