ಭಾರತ ವಿಶ್ವಗುರುವಲ್ಲ, ಬದಲಾಗಿ ವಿಶ್ವದ ಭಿಕ್ಷುಕ ದೇಶ: ಟಿಎಂಸಿ ನಾಯಕ ಯಶವಂತ್ ಸಿನ್ಹಾ

ಭಾರತದ ಸದ್ಯ ವಿಶ್ವಗುರುನಿಂದ ವಿಶ್ವದ ಭಿಕ್ಷುಕವಾಗಿದೆ ಇಡೀ ವಿಶ್ವಕ್ಕೆ ಲಸಿಕೆ ಪೂರೈಕೆ ಮಾಡುತ್ತಿದ್ದ ದೇಶ, ಸದ್ಯ ಕರೋನದಿಂದ ಜನರ ಪ್ರಾಣ ಕಾಪಾಡಲು ಸಹಾಯಕ್ಕಾಗಿ ಬೇರೆಯವರನ್ನು ಅಂಗಲಾಚಿ ಬೇಡುವಂತಹ ಪರಿಸ್ಥಿತಿ ತಲುಪಿದೆ ಎಂದು ಟಿಎಂಸಿ ನಾಯಕ ಯಶವಂತ್ ಸಿನ್ಹಾ ಕಿಡಿಕಾರಿದ್ದಾರೆ. 
ಯಶವಂತ್ ಸಿನ್ಹಾ-ಮೋದಿ
ಯಶವಂತ್ ಸಿನ್ಹಾ-ಮೋದಿ

ನವದೆಹಲಿ: ಭಾರತದ ಸದ್ಯ ವಿಶ್ವಗುರುನಿಂದ ವಿಶ್ವದ ಭಿಕ್ಷುಕವಾಗಿದೆ ಇಡೀ ವಿಶ್ವಕ್ಕೆ ಲಸಿಕೆ ಪೂರೈಕೆ ಮಾಡುತ್ತಿದ್ದ ದೇಶ, ಸದ್ಯ ಕರೋನದಿಂದ ಜನರ ಪ್ರಾಣ ಕಾಪಾಡಲು ಸಹಾಯಕ್ಕಾಗಿ ಬೇರೆಯವರನ್ನು ಅಂಗಲಾಚಿ ಬೇಡುವಂತಹ ದಾರುಣ, ದಯನೀಯ ಪರಿಸ್ಥಿತಿ ತಲುಪಿದೆ ಎಂದು ಮಾಜಿ ಕೇಂದ್ರ ಸಚಿವ, ಟಿಎಂಸಿ ನಾಯಕ ಯಶವಂತ್ ಸಿನ್ಹಾ ಕಿಡಿಕಾರಿದ್ದಾರೆ. 

ಟ್ವಿಟರ್ನಲ್ಲಿ ಅವರು ಅಸಮಾಧಾನ ಹೊರಹಾಕಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗಿದ್ದರು ಆಡಳಿತ ನಡೆಸುವವರು ಇದರ ನಿಯಂತ್ರಣಕ್ಕೆ ಬೇಕಾದ ಕ್ರಮ ಕೈಗೊಳ್ಳಲುವ ಬದಲು ಭಾಷಣಗಳಿಂದ, ಮಾತಿನಿಂದ ಜನರ ಹೊಟ್ಟೆ ತುಂಬಿಸಲು ಹೊರಟಿದ್ದಾರೆ ಎಂದೂ ಅವರು ಲೇವಡಿ ಮಾಡಿದರು.

ಇಂದು ದೇಶದಲ್ಲಿ 3 ಲಕ್ಷದ, 23,144 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 1,76,36,307ಕ್ಕೇರಿದೆ. ಕೊರೊನಾ ಸೋಂಕಿತ ಚೇತರಿಕೆಯ ಪ್ರಮಾಣ ಶೇ.82.54 ರಷ್ಟಿದ್ದು, ಸಾವಿನ ಸಂಖ್ಯೆ 1,97,894ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com