
ರಾಯ್ಪುರ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆ, ಮಾಜಿ ಸಂಸದೆ, ಕಾಂಗ್ರೆಸ್ ಹಿರಿಯ ಮುಖಂಡರಾದ ಕರುಣಾ ಶುಕ್ಲಾ ಅವರು ಕೊಯಿಡ್ -19 ನಿಂದ ಸಾವನ್ನಪ್ಪಿದ್ದಾರೆ. ರಾಯ್ಪುರದ ರಾಮಕೃಷ್ಣ ಕೇರ್ ಆಸ್ಪತ್ರೆಯಲ್ಲಿ ಅವರು ಮಂಗಳವಾರ ಮುಂಜಾನೆ ನಿಧನರಾದರು.
ಕೋವಿಡ್ ಗೆ ಪಾಸಿಟಿವ್ ವರದಿ ಪಡೆದ ಬಳಿಕ ಶುಕ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
32 ವರ್ಷಗಳ ಕಾಲ ವಿವಿಧ ಸ್ಥಾನಮಾನಗಳ ಜವಾಬ್ದಾರಿ ಹೊತ್ತು ಬಿಜೆಪಿಯಲ್ಲಿದ್ದ ಶುಕ್ಲಾ, ಕೇಸರಿ ಪಕ್ಷವು ತನ್ನ ಉಮೇದುವಾರಿಕೆಯನ್ನು ಕಡೆಗಣಿಸಿದ ಆರೋಪದ ಬಳಿಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ 2013 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಸೇರಿದ್ದರು.2018 ರ ಛತ್ತೀಸ್ ಘರ್ ವಿಧಾನಸಭೆ ಚುನಾವಣೆಯಲ್ಲಿ ರಾಜನಂದಗಾಂವ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷದ ಟಿಕೆಟ್‌ನಲ್ಲಿ ಅವರು ತಮ್ಮ ಕೊನೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.
ಛತ್ತೀಸ್ ಘರ್ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಕರುಣಾ ಶುಕ್ಲಾ ಅವರ ನಿಧನದ ಬಗ್ಗೆ ದಂತಾಪ ವ್ಯಕ್ತಪಡಿಸಿದರು ಮತ್ತು ಅವರೊಂದಿಗೆ ರಾಜಕೀಯದ ಹೊರತಾಗಿ ನಿಕಟ ಕೌಟುಂಬಿಕ ಸಂಬಂಧವಿದೆ ಎಂದು ಹೇಳಿದರು.
Advertisement