ತಮಿಳುನಾಡು: ಮುಂದಿನ ಆದೇಶದವರೆಗೂ ಕೋವಿಡ್ ನಿರ್ಬಂಧ ವಿಸ್ತರಣೆ, ಮತ ಎಣಿಕೆ ದಿನ ಸಂಪೂರ್ಣ ಲಾಕ್ ಡೌನ್

ಏಪ್ರಿಲ್ 20ರಿಂದ ಜಾರಿಯಲ್ಲಿರುವ ಕೋವಿಡ್-19 ನಿರ್ಬಂಧಗಳನ್ನು ತಮಿಳುನಾಡು ಸರ್ಕಾರ ವಿಸ್ತರಿಸಿದ್ದು, ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುವ ಮೇ 2 ರಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ನ್ನು ಜಾರಿಗೊಳಿಸಲಾಗಿದೆ. 
ಅಣ್ಣಾ ಪ್ರತಿಮೆ ಜಂಕ್ಷನ್
ಅಣ್ಣಾ ಪ್ರತಿಮೆ ಜಂಕ್ಷನ್

ಚೆನ್ನೈ: ಏಪ್ರಿಲ್ 20ರಿಂದ ಜಾರಿಯಲ್ಲಿರುವ ಕೋವಿಡ್-19 ನಿರ್ಬಂಧಗಳನ್ನು ತಮಿಳುನಾಡು ಸರ್ಕಾರ ವಿಸ್ತರಿಸಿದ್ದು, ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುವ ಮೇ 2 ರಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ನ್ನು ಜಾರಿಗೊಳಿಸಲಾಗಿದೆ. 

ಆದಾಗ್ಯೂ, ಮತ ಎಣಿಕೆ ದಿನ ಅಧಿಕಾರಿಗಳು, ಪಕ್ಷದ ಪದಾಧಿಕಾರಿಗಳು, ಅಭ್ಯರ್ಥಿಗಳು, ಏಜೆಂಟರ ಓಡಾಟ ಮತ್ತು ಆಹಾರ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ರಾತ್ರಿ 10 ಗಂಟೆಯಿಂದ ಬೆಳಗ್ಗೆ 4 ಗಂಟೆಯವರೆಗಿನ ರಾತ್ರಿ ಕರ್ಫ್ಯೂ ಆದೇಶದಲ್ಲಿ ಯಾವುದೇ ವಿನಾಯಿತಿ ಇಲ್ಲದೆ ಮುಂದುವರೆಯಲಿದೆ ಎಂದು ಗುರುವಾರ ಪ್ರಕಟಿಸಿರುವ ಆದೇಶದಲ್ಲಿ ಸರ್ಕಾರ ಹೇಳಿದೆ.

 ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿಸಲ್ಪಟ್ಟ ಪ್ರಯಾಣಿಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಪ್ರಯಾಣವನ್ನು ಸರ್ಕಾರ ನಿರ್ಬಂಧಿಸಿದೆ. ಮೀನು ಮಾರುಕಟ್ಟೆ, ಮೀನು ಮಳಿಗೆಗಳು, ಚಿಕ್ಕನ್ ಸ್ಟಾಲ್ ಮತ್ತಿತರ ಮಾಂಸದ ಮಳಿಗೆಗಳು ಶನಿವಾರದಂದು ಬಂದ್ ಆಗಲಿವೆ.

 ಏಪ್ರಿಲ್ 10ಕ್ಕಿಂತ ಮುಂಚೆ ಅನುಮತಿ ಪಡೆದಿರುವ ಧಾರ್ಮಿಕ ಉತ್ಸವಗಳಿಗೆ 50 ಜನರಿಗೆ ಅವಕಾಶ ನೀಡಲಾಗಿತ್ತು. ಆದಾಗ್ಯೂ, ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತಿಲ್ಲ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಎಸ್ ಎಸ್ ಸಿ, ಯುಪಿಎಸ್ ಸಿ, ಆರ್ ಆರ್ ಬಿಯಂತಹ ಪರೀಕ್ಷೆ ಬರೆಯುವ ಅಭ್ಯರ್ಥಿಗಳು, ಪ್ರವೇಶ ಪತ್ರದೊಂದಿಗೆ ಪ್ರಯಾಣಿಸಲು ಅನುಮತಿಯನ್ನು ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com