ತಾಲಿಬಾನಿಗಳ ಮೇಲೆ ಪಾಕಿಸ್ತಾನದ ಐಎಸ್ಐ ಪ್ರಭಾವಕ್ಕೆ ಯತ್ನ.. ಆದರೆ..!!: ಗುಪ್ತಚರ ಇಲಾಖೆ ವರದಿ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಖಚಿತವಾಗುತ್ತಿದ್ದಂತೆಯೇ ಅತ್ತ ಪಾಕಿಸ್ತಾನದ ಗುಪ್ತಚರ ಇಲಾಖೆ ತಾಲಿಬಾನಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದ ಸ್ಫೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರ ಹಾಕಿದೆ.
ತಾಲಿಬಾನ್ ದಂಗೆಕೋರರು
ತಾಲಿಬಾನ್ ದಂಗೆಕೋರರು

ನವದೆಹಲಿ: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಖಚಿತವಾಗುತ್ತಿದ್ದಂತೆಯೇ ಅತ್ತ ಪಾಕಿಸ್ತಾನದ ಗುಪ್ತಚರ ಇಲಾಖೆ ತಾಲಿಬಾನಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದ ಸ್ಫೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರ ಹಾಕಿದೆ.

ಹೌದು.. ಪಾಕಿಸ್ತಾನದ ಗುಪ್ತಚರ ಇಲಾಖೆ ಅಧಿಕಾರಿಗಳು ತಾಲಿಬಾನ್ ಮುಖಂಡರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ಆಫ್ಘಾನಿಸ್ತಾನ ಆಡಳಿತದ ಬಗ್ಗೆ ಮಾತುಕತೆ ನಡೆಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಅದಾಗಲೇ ಆಫ್ಘಾನಿಸ್ತಾನದಲ್ಲಿ ತಮ್ಮ ಪಾರುಪತ್ಯ ಸಾಧಿಸಿದ್ದ ತಾಲಿಬಾನಿ ಮುಖಂಡರು  ಪಾಕ್ ಐಎಸ್ಐ ಮಾತಿಗೆ ಸೊಪ್ಪು ಹಾಕಿಲ್ಲ ಎನ್ನಲಾಗಿದೆ.

ಈ ಹಿಂದೆ, ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಶಿಬಿರಗಳು ಇದ್ದವು ಎಂಬುದನ್ನು ನಾವು ಮರೆಯುವಂತಿಲ್ಲ. ಹೀಗಾಗಿ ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾಗರೂಕರಾಗಿರಬೇಕು. ಕಾಶ್ಮೀರದಲ್ಲಿ ಭದ್ರತಾ ನಿಗಾ ಹೆಚ್ಚಿಸಬೇಕಾಗುತ್ತದೆ. ಆದರೆ ಈ ವಿಷಯಗಳು ನಿಯಂತ್ರಣದಲ್ಲಿವೆ ಮತ್ತು ಆಫ್ಘಾನಿಸ್ತಾನದಲ್ಲಿ ಪಾಕಿಸ್ತಾನ  ಆಧಾರಿತ ಗುಂಪುಗಳು ಪರಿಸ್ಥಿತಿಯನ್ನು ಬಳಸಿಕೊಳ್ಳುವ ಸಾಮರ್ಥ್ಯ ಕಡಿಮೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಾಶ್ಮೀರದ ಕುರಿತು ನಿಲುವು ಸ್ಪಷ್ಟಪಡಿಸಿರುವ ತಾಲಿಬಾನ್
ಕಾಶ್ಮೀರದ ಕುರಿತು ತಾಲಿಬಾನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಕಾಶ್ಮೀರ ವಿಚಾರ ದ್ವಿಪಕ್ಷೀಯವಾಗಿದ್ದು, ಅದು ಉಭಯ ದೇಶಗಳ ಆಂತರಿಕ ಸಮಸ್ಯೆ ಎಂದು ತಾಲಿಬಾನ್ ಪರಿಗಣಿಸುತ್ತದೆ, ಹೀಗಾಗಿ ಅದರ ಗಮನ ಕಾಶ್ಮೀರದ ಮೇಲೆ ಅಸಂಭವ. ಆದಾಗ್ಯೂ ತೀವ್ರ ನಿಗಾ ಅತ್ಯಗತ್ಯ. ಪಾಕಿಸ್ತಾನ ಮೂಲದ ಉಗ್ರ  ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ ಮತ್ತು ಲಷ್ಕರ್-ಇ-ಜಾಂಗ್ವಿ ಅಫ್ಘಾನಿಸ್ತಾನದಲ್ಲಿ ಕೆಲ ಪ್ರದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿವೆ. ಅವರು ತಾಲಿಬಾನ್ ಜೊತೆಗೆ ಕೆಲವು ಗ್ರಾಮಗಳು ಮತ್ತು ಕಾಬೂಲ್‌ನ ಕೆಲವು ಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಕೂಡ ನಿರ್ಮಿಸಿದ್ದಾರೆ ಎಂದು ಗುಪ್ತಚರ ವರದಿಯಲ್ಲಿ  ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com