ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ್ದ 7 ವಿಮಾನಗಳು ಕಳೆದ 2 ವರ್ಷಗಳಲ್ಲಿ ಪತನಗೊಂಡಿದೆ ಎಂದು ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಪ್ರಶ್ನೆಗಳಿಗೆ ಉತ್ತರಿಸಿದ್ದು, ಪ್ರತಿ ಐಎಎಫ್ ವಿಮಾನ ಪತನದ ಪ್ರಕರಣದ ಬಗ್ಗೆಯೂ ಪ್ರತ್ಯೇಕ ಸಮಿತಿಗಳಿಂದ ತನಿಖೆ ಮಾಡಿಸಲಾಗುತ್ತಿದೆ ಎಂದು ಲೊಕಸಭೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಪತನಗೊಂಡ ಮಿರಾಜ್-2000 ವಿಮಾನವೂ ಸೇರಿದಂತೆ ಎರಡು ವರ್ಷಗಳಲ್ಲಿ 7 ವಿಮಾನಗಳು ಪತನಗೊಂಡಿದೆ. ಅಪಘಾತಕಗಳಿಗೆ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ.
ಅಪಘಾತದ ಡೇಟಾ ಬೇಸ್ ಸಂಗ್ರಹಿಸುವುದು, ತರಬೇತಿ ವಿಧಾನವನ್ನು ಸುಧಾರಿಸುವುದು ಮತ್ತು ಸಿಮ್ಯುಲೇಟರ್‌ಗಳ ಬಳಕೆಯನ್ನು ಹೆಚ್ಚಿಸುವುದು, ಏರೋಸ್ಪೇಸ್ ಸುರಕ್ಷಾ ಸಂಘಟನೆಯನ್ನು ಉತ್ತೇಜಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
Advertisement