ದಕ್ಷಿಣ ಭಾರತದಲ್ಲಿ ಟೊಮೆಟೊ ಬೆಲೆ ಕೆ.ಜಿ.ಗೆ 140 ರೂ.: ಅತಿವೃಷ್ಟಿ ಕಾರಣ

ಕರ್ನಾಟಕ ರಾಜ್ಯದಲ್ಲಿ ಮಂಗಳೂರು ಮತ್ತು ತುಮಕೂರಿನಲ್ಲಿ ಟೊಮೆಟೊ ಪ್ರತಿ ಕೆ.ಜಿ.ಗೆ 100 ರೂ. ಆದರೆ ಧಾರವಾಡದಲ್ಲಿ 75 ರೂ., ಮೈಸೂರಿನಲ್ಲಿ 74 ರೂ., ಶಿವಮೊಗ್ಗದಲ್ಲಿ 67 ರೂ.,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರುತ್ತಿರುವುದು ಎಲ್ಲರಿಗೂ ತಿಳಿದೇ ಇರುತ್ತದೆ. ದಕ್ಷಿಣಭಾರತದ ಹಲವು ರಾಜ್ಯಗಳಲ್ಲಿ ಟೊಮೆಟೊ ಬೆಲೆ ಪ್ರತಿ ಕೆ.ಜಿ.ಗೆ 140 ರೂ.ಗಳಿಗೆ ಮಾರಾಟವಾಗುತ್ತಿದೆ. 

ಸೆಪ್ಟೆಂಬರ್ ಅಂತ್ಯದಿಂದಲೂ ಟೊಮೆಟೊ ಬೆಲೆ ಏರಿಕೆಯತ್ತ ಮುಖ ಮಾಡಿತ್ತು. ಸುರಿಯುತ್ತಿರುವ ಭಾರೀ ಮಳೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಉತ್ತರ ಭಾರತದಲ್ಲಿ  ಟೊಮೆಟೊ ಬೆಲೆ 30-83 ರೂ. ಗಳಿಗೆ ಮಾರಾಟವಾಗುತ್ತಿದೆ.

ಪೂರ್ವದಲ್ಲಿ 30- 80 ರೂ.ಗಳಿಗೆ ಮಾರಾಟವಾಗುತ್ತಿದೆ ಅಂಡಮಾನ್ ನಿಕೋಬಾರ್ ನ ಮಾಯಾಬಂದರಿನಲ್ಲಿ ಟೊಮೆಟೊ ಬೆಲೆ 140 ರೂ.ಗಳಿಗೆ ಮಾರಾಟವಾಗುತ್ತಿದ್ದರೆ, ಕೇರಳದ ತಿರುವನಂತಪುರದಲ್ಲಿ ಕೆ.ಜಿಗೆ 125 ರೂ.ಗಳಿಗೆ ಮಾರಾಟವಾಗುತ್ತಿದೆ. 

ಕರ್ನಾಟಕ ರಾಜ್ಯದಲ್ಲಿ ಮಂಗಳೂರು ಮತ್ತು ತುಮಕೂರಿನಲ್ಲಿ ಟೊಮೆಟೊ ಪ್ರತಿ ಕೆ.ಜಿ.ಗೆ 100 ರೂ. ಆದರೆ ಧಾರವಾಡದಲ್ಲಿ 75 ರೂ., ಮೈಸೂರಿನಲ್ಲಿ 74 ರೂ., ಶಿವಮೊಗ್ಗದಲ್ಲಿ 67 ರೂ., ಬೆಂಗಳೂರಿನಲ್ಲಿ 57 ರೂ.ಗಳಿಗೆ ಮಾರಾಟವಾಗುತ್ತಿದೆ. ತಮಿಳುನಾಡಿನಲ್ಲಿ ಟೊಮೆಟೊ ಬೆಲೆ ಗರಿಷ್ಟ 102 ರೂ. ಬೆಲೆಗೆ ಮಾರಾಟವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com