ಕೇಂದ್ರ ಸರ್ಕಾರದಿಂದ ಮುಂದಿನ ಸಿಡಿಎಸ್ ಆಯ್ಕೆ ಪ್ರಕ್ರಿಯೆ ಶುರು: ಜನರಲ್ ಎಂ.ಎಂ. ನರವಣೆ ಹೆಸರು ಮುಂಚೂಣಿಯಲ್ಲಿ

ಆಯ್ಕೆ ಪ್ರಕ್ರಿಯೆಗಾಗಿ ಸಮಿತಿ ರಚನೆಯಾಗಿದ್ದು ಅಂತಿಮ ಹೆಸರುಗಳ ಪಟ್ಟಿಯನ್ನು ಶಿಫಾರಸ್ಸು ಮಾಡಲಿದೆ. ಸದ್ಯ ಸೇನೆಯಲ್ಲಿರುವ ಮುಖ್ಯಸ್ಥರಲ್ಲೇ ನರವಣೆ ಸೀನಿಯರ್ ಆಗಿದ್ದಾರೆ.
ಜನರಲ್ ಎಂ.ಎಂ ನರವಣೆ
ಜನರಲ್ ಎಂ.ಎಂ ನರವಣೆ

ನವದೆಹಲಿ: ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅವಘಡದಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಅವರ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ಆಯ್ಕೆ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಶುರು ಮಾಡಿದೆ. 

ಸೇನೆಯ ಉನ್ನತ ಸಿಡಿಎಸ್ ಹುದ್ದೆಗೆ ಜನರಲ್ ಎಂ.ಎಂ ನರವಣೆ ಅವರ ಹೆಸರು ಕೇಳಿಬರುತ್ತಿದೆ. ಮುಂದಿನ 5 ತಿಂಗಳಲ್ಲಿ ಅರ್ಮಿ ಸ್ಟಾಫ್ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾಗುತ್ತಿದ್ದಾರೆ. ಹೀಗಾಗಿ ಸಿಡಿಎಸ್ ಆಯ್ಕೆ ಕುತೂಹಲ ಹುಟ್ಟಿಸಿದೆ.

ಆಯ್ಕೆ ಪ್ರಕ್ರಿಯೆಗಾಗಿ ಸಮಿತಿ ರಚನೆಯಾಗಿದ್ದು ಅಂತಿಮ ಹೆಸರುಗಳ ಪಟ್ಟಿಯನ್ನು ಶಿಫಾರಸ್ಸು ಮಾಡಲಿದೆ. ಸದ್ಯ ಸೇನೆಯಲ್ಲಿರುವ ಮುಖ್ಯಸ್ಥರಲ್ಲೇ ನರವಣೆ ಸೀನಿಯರ್ ಆಗಿದ್ದಾರೆ. ಕಳೆದ ವರ್ಷ ಜನವರಿ ತಿಂಗಳಲ್ಲಿ ಜನರಲ್ ರಾವತ್ ಅವರು ಭಾರತದ ಪ್ರಥಮ ಸಿಡಿಎಸ್ ಹುದ್ದೆ ಅಲಂಕರಿಸಿದ್ದರು. ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥ ಹುದ್ದೆ ಸಿಡಿಎಸ್. ರಾವತ್ ಅವರ ಸೇವಾವಧಿ 2023 ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳುತ್ತಲಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com